December 19, 2024

Newsnap Kannada

The World at your finger tips!

bangalore airport

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 9 ಕೋಟಿ ರು ಮೌಲ್ಯದ ಡ್ರಗ್​ ವಶ – ಇಬ್ಬರ ಬಂಧನ

Spread the love

ಬೆಂಗಳೂರು (Bangalore) ವಿಮಾನ ನಿಲ್ದಾಣದಲ್ಲಿ 9 ಕೋಟಿ ರು ಮೌಲ್ಯದ ಡ್ರಗ್ (Drug)​ ಸೀಜ್ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ

ರಾಜಧಾನಿಗೆ ವಿದೇಶಗಳಿಂದ ಮಾದಕವಸ್ತುಗಳ ಅಕ್ರಮ ಸಾಗಾಟ ಹೆಚ್ಚಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 9 ಕೋಟಿ ರು ಮೌಲ್ಯದ ಡ್ರಗ್ಸ್​ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

1002 ಕೆ.ಜಿ. ತೂಕದ 7 ಕೋಟಿ ರೂಪಾಯಿ ಬೆಲೆಬಾಳುವ ಹೆರಾಯಿನ್​ ಮತ್ತು 4.58 ಕೆಜಿ ತೂಕದ 2.82 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.

Bangalore airport

ದುಬೈನಿಂದ (Dubai) ಬೆಂಗಳೂರಿಗೆ ಸಾಗಿಸುತ್ತಿದ್ದ ವೇಳೆ ಸೀಜ್ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!