ಅಮೇರಿಕಾದಲ್ಲಿ ನವೆಂಬರ್‌ನಲ್ಲಿ ನಡೆಯುವ ಚುಣಾವಣೆಯ ಹಿನ್ನೆಲೆಯಲ್ಲಿ ಡೋನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡುತ್ತಿದ್ದ 276 ನಕಲಿ ಖಾತೆಗಳನ್ನು ಫೇಸ್‌ಬುಕ್ ರದ್ದು ಮಾಡಿದೆ. ಈ ಖಾತೆಗಳನ್ನು ಸೃಷ್ಠಿ ಮಾಡಿದ್ದ ರ್ಯಾಲಿ ಫೋರ್ಜ್ ಎಂಬ ಸಂಸ್ಥೆಯನ್ನು ಸಹ ಫೇಸ್‌ಬುಕ್ ಶಾಶ್ವತವಾಗಿ ರದ್ದು ಮಾಡಿದೆ.
ರ್ಯಾಲಿ ಫೋರ್ಜ್ ಸಂಸ್ಥೆ ಸೃಷ್ಥಿ ಮಾಡಿದ್ದ ಈ ನಕಲಿ ಖಾತೆಗಳು ಮುಂಬರುವ ಅಧ್ಯಕ್ಷೀಯ ಚುಣಾವಣೆಯಲ್ಲಿ ಮತದಾರರಿಗೆ ಟ್ರಂಪ್ ಪರ ಒಲವು ಬರುವಂತೆ ಮಾಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದರು.
ಪ್ರಸ್ತುತ ಈ ಸಂಸ್ಥೆಯನ್ನು ಫೇಸ್‌ಬುಕ್ ನಿಷೇಧ ಮಾಡಿದೆ. ಆದರೆ 2018ರ ಮಧ್ಯಂತರ ಚುಣಾವಣೆಯ ವೇಳೆಯಿಂದಲೇ ರ್ಯಾಲಿ ಫೋರ್ಜ್ ಸಂಸ್ಥೆ ಕೆಲಸ ನಿರ್ವಹಿಸುತ್ತಿತ್ತು. ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನು ಹೊಗಳುವಂತಹ, ಮತದಾರರ ಒಲವನ್ನು ಸೆಳೆಯುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದ ಈ ಸಂಸ್ಥೆ, ಡೆಮಕ್ರಾಟಿಕ್ ಪಕ್ಷದ ಅಭ್ಯರ್ಥಿಗಳು ಮತ್ತು ಡೆಮಕ್ರಾಟಿಕ್ ಪಕ್ಷವನ್ನು ತೆಗಳುವಂತಹ ಪೋಸ್ಟ್‌ಗಳನ್ನು ಯಾವಗಲ್ಲೂ ಹಾಕುತ್ತಿತ್ತು.
‘ದಿ ವಾಷಿಂಗ್ಟನ್ ಪೋಸ್ಟ್’ ಕಳೆದ ತಿಂಗಳು ‘ಟರ್ನಿಂಗ್ ಪಾಯಿಂಟ್ ಆ್ಯಕ್ಷನ್’ ‘ ಸಂಸ್ಥೆಯು ಟ್ರಂಪ್ ಪರವಾದ ಸಂದೇಶಗಳು ಹಾಗೂ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲು ಯುವಕರನ್ನು ಹಣ ಕೊಟ್ಟು ಬಳಸಿಕೊಳ್ಳುತ್ತಿದೆ. ಇದು ಫೇಸ್‌ಬುಕ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ವರದಿ ಮಾಡಿದ್ದ ಹಿನ್ನೆಲೆಯಲ್ಲಿ , ಇಂತಹ ಖಾತೆಗಳ ಬಗ್ಗೆ ಪರಿಶೀಲನೆ ನಡೆಸಿದ ಫೇಸ್‌ಬುಕ್ ಈ ನಿರ್ಣಯವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
More Stories
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ