January 29, 2026

Newsnap Kannada

The World at your finger tips!

kageri

ಚುನಾವಣಾ ಸುಧಾರಣೆ :ಕಣ್ಣೀರಿಟ್ಟ ಸ್ಪೀಕರ್​ ಕಾಗೇರಿ

Spread the love

ಚುನಾವಣಾ ಸುಧಾರಣೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಚುನಾವಣಾ ಸುಧಾರಣೆ ಬಹಳ ದೊಡ್ಡ ಜವಾಬ್ದಾರಿ. ಇದರ ಗಾಂಭೀರ್ಯತೆ ಗೊತ್ತಿರೋದ್ರಿಂದ ಸದನದಲ್ಲಿ ಚರ್ಚೆ ಮಾಡೋದು ಅಗತ್ಯ. ಆದರೆ ನಿತ್ಯದ ಕೆಲಸವನ್ನು ಬದಿಗಿಟ್ಟು ಇದನ್ನು ಚರ್ಚೆ ಮಾಡೋದಿಲ್ಲ ಎಂದು ಕಾಗೇರಿ ಭಾವುಕರಾಗಿದ್ದಾರೆ.

ಸಂವಿಧಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ಎಷ್ಟು ಒಳ್ಳೆಯ ಚರ್ಚೆ ಮಾಡಿದ್ದೇವೆ ಈ ಚರ್ಚೆಯಿಂದ ಸಾಕಷ್ಟು ಸದಸ್ಯರು ಸಂತೋಷ ಪಟ್ಟರು. ಬೇರೆ ಬೇರೆ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಸ್ವಭಾವ ನಮ್ಮದಾಗಬೇಕು ಎಂದರು

ಮುಕ್ತವಾದ ವೇದಿಕೆಗಳಲ್ಲಿ ಇದು ಚರ್ಚೆಗಳು ಆಗಬೇಕು. ಕೇವಲ ದೋಷಾರೋಪಣೆ ಮತ್ತು ಟೀಕೆಗಳು ಆಗಬಾರದು.

error: Content is protected !!