ಯುವಕನ ಜೊತೆ ಸೇರಿ ತನ್ನ ಪತಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಘಟನ ಚನ್ನರಾಯಪಟ್ಟಣದಲ್ಲಿ ಜರುಗಿದೆ
ಆನಂದ್ ಕುಮಾರ್(42) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ ಪತ್ನಿ ಸುನಿತಾಳನ್ನು ಪೊಲೀಸರು ಬಂಧಿಸಿದ್ದಾರೆ
ಚನ್ನರಾಯಪಟ್ಟಣ ತಾಲೂಕು ಕಾವಲುಹೊಸೂರಿನಲ್ಲಿ ಜ. 31ರಂದು ಮಕ್ಕಳನ್ನು ಶಾಲೆಯಿಂದ ಕರೆತರಲು ಹೊರಟಿದ್ದ ವೇಳೆ ರಸ್ತೆ ಮಧ್ಯೆ ಆನಂದ್ ಬೈಕ್ ಅಡ್ಡಗಟ್ಟಿ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದನು.
ಈ ವೇಳೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ನಾಲ್ಕೈದು ಆಯಾಮಗಳಿಂದ ಆರೋಪಿ ಪತ್ತೆಹಚ್ಚುವಲ್ಲಿ ಹರಸಾಹಸ ಮಾಡಿದ್ದರು
ಈ ವೇಳೆ, ಅನುಮಾನಗೊಂಡ ಪೊಲೀಸರು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ನನಗೆ ಏನು ಗೊತ್ತಿಲ್ಲ ಎಂದು ತಪ್ಪಿಸಿಕೊಂಡಿದ್ದಳು.
ಆದರೆ, ತಾಂತ್ರಿಕ ತನಿಖೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಳು.
ವಿಚಾರಣೆ ವೇಳೆ ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸುವ ಮೂಲಕ ಹಂತಕಿಯಾಗಿದ್ದಾಳೆ.
ಪತಿ ಆನಂದ್ ಮತ್ತು ಸುನಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2014ರಲ್ಲಿ ಸುನಿತಾ ಡ್ರೈವಿಂಗ್ ಕಲಿಯಬೇಕು ಎಂದಾಗ ಆನಂದ್ ತರಬೇತಿ ಶಾಲೆಗೆ ಸೇರಿಸಿದ್ದನು. ಈ ವೇಳೆ ಡ್ರೈವಿಂಗ್ ಕಲಿಯುವಾಗ ಬೇರೆ ಮಹಿಳೆಯೊಂದಿಗೆ ಗಲಾಟೆ ಮಾಡಿಕೊಂಡು ಆಕೆಯನ್ನು ಕೊಲೆ ಮಾಡಿ ಜೈಲಿಗೆ ಸೇರಿದಳು.
ಜೈಲಿನಿಂದ ಹೊರಬಂದು ಗಂಡನೊಂದಿಗೆ ಸಂಸಾರ ಮಾಡುತ್ತಿದ್ದಳು. ಆದರೆ, ಕೋವಿಡ್-19 ನಂತರದ ದಿನಗಳಲ್ಲಿ ಯೋಗ ತರಬೇತಿಗೆ ಸೇರಿದ ಸುನಿತಾ ಯೋಗ ಕ್ಲಾಸ್ನಲ್ಲಿ ನವೀನ್ ಎಂಬಾತನೊಂದಿಗೆ ಪರಿಚಯ ಮಾಡಿಕೊಂಡಿದ್ದಳು.
ಪರಿಚಯವಾಗಿ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಅನೈತಿಕ ಸಂಬಂಧದ ಮೂಲಕ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದರು.
ಈ ವಿಚಾರ ಗಂಡನಿಗೆ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಜಗಳ ಶುರುವಾಗಿತ್ತು. ಅಕ್ರಮ ಸಂಬಂಧದ ವಿಚಾರ ಗಂಡನಿಗೆ ಗೊತ್ತಾದ ಹಿನ್ನಲೆಯಲ್ಲಿ ಪತಿಯನ್ನು ಮುಗಿಸಬೇಕೆಂದು ಯೋಚಿಸಿ ತನ್ನ ಪ್ರಿಯಕರ ನವೀನ್ ಜೊತೆ ಸೇರಿಕೊಂಡು ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಳು.
ಐದು ದಿನದ ಬಳಿಕ ಕೊಲೆ ಪ್ರಕರಣ ಬೇಧಿಸುವಲ್ಲಿ ಚನ್ನರಾಯಪಟ್ಟಣ ಹಾಗೂ ನುಗ್ಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ