ತಾರಕಕ್ಕೇರಿದ ಹಿಜಬ್ ವಿವಾದ – ಬನಹಟ್ಟಿಯಲ್ಲಿ ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ

Team Newsnap
1 Min Read

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಹಿಜಬ್ ವಿವಾದ ಮತ್ತಷ್ಟು ತಾರಕಕ್ಕೇರಿದೆ.

ಬನಹಟ್ಟಿ ನಗರದ ಖಾಸಗಿ ಕಾಲೇಜ್‍ನ ಶಿಕ್ಷಕರೊಬ್ಬರಿಗೆ ಕಿಡಿಗೇಡಿಗಳು ರಾಡ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಇಂದು ಬೆಳಗ್ಗೆಯಿಂದ ಹಿಜಬ್ ವಿವಾದ ತಾರಕಕ್ಕೇರಿದೆ, ಪ್ರಕ್ಷುಬ್ಧ ಸ್ಥಿತಿ ಕಂಡು ಬಂದಿದೆ.

ಈ ನಡುವೆ  ಬನಹಟ್ಟಿಯ ಖಾಸಗಿ ಕಾಲೇಜಿನ ಶಿಕ್ಷಕ ಮಂಜುನಾಥ್ ನಾಯಕ್ (30) ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ.

ಬನಹಟ್ಟಿಯಲ್ಲಿ ಇಂದು ಬೆಳಗ್ಗೆಯಿಂದ ಕಲ್ಲು ತೂರಾಟ, ಲಾಠಿ ಪ್ರಹಾರ ಹೀಗೆ ಪ್ರಕ್ಷುಬ್ಧ ವಾತಾವರಣವಿತ್ತು. ಸಂಜೆ ಹೊತ್ತಿಗೆ ಪರಿಸ್ಥಿತಿ ತಿಳಿಯಾಯ್ತು ಎನ್ನುವಾಗಲೇ ಮಂಜುನಾಥ್ ನಾಯಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಮಂಜುನಾಥ ಶಿರಸಿ ಮೂಲದವರಾಗಿದ್ದು, ಬನಹಟ್ಟಿ ಖಾಸಗಿ ಶಾಲೆಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಸಂಜೆ ರಸ್ತೆ ದಾಟುವಾಗ ಕಿಡಿಗೇಡಿಗಳು ಕಬ್ಬಿಣದರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ಮಂಜುನಾಥ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ.

Share This Article
Leave a comment