January 29, 2026

Newsnap Kannada

The World at your finger tips!

aras

ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ : ಅರಸ್ ಆಕ್ರೋಶ

Spread the love

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸುವುದಾಗಿ ಹೇಳುತ್ತಿರುವ ರಾಜ್ಯ ಸರ್ಕಾರ ಕೋಟಿ ಕೋಟಿ ರು ಖರ್ಚು ಮಾಡಲು ಮುಂದಾಗಿದೆ. ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಸರಳ ದಸರಾ ಹೆಸರಿನಲ್ಲಿ ಕೋಟಿಕೋಟಿ ಲೂಟಿ ಮಾಡಲು ಹೊರಟಿದ್ದಾರೆ. ಸರಳ ದಸರಾ ಎಂದರೆ ಇವರ ದೃಷ್ಟಿಯಲ್ಲಿ ಹದಿನೈದು‌ ಕೋಟಿ. ಈ ಮೂಲಕ ಸರಳ ದಸರಾ ನೆಪದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲೂಟಿ‌ ಮಾಡಲು ಹೊರಟಿದ್ದಾರೆ. ಹೀಗಾಗಿ ಮಹಿಷನಂತೆ ಚುನಾಯಿತ ಪ್ರತಿನಿಧಿಗಳನ್ನೂ ಧಮನಿಸಲಿ ಚಾಮುಂಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಯಾವುದೇ ಆಶೀರ್ವಾದ ಸಿಗುವುದಿಲ್ಲ. ಜನರ ಆರೋಗ್ಯ ಕಾಪಾಡಿದಾಗ ಮಾತ್ರ ಚಾಮುಂಡಿ ಆಶೀರ್ವಾದ ಸಿಗುತ್ತದೆ. ಹೀಗಾಗಿ  ಕೋವಿಡ್ ತುರ್ತು ಸಂದರ್ಭದಲ್ಲಿ ‌ಜನಪರ ಕಾಳಜಿ‌ ಇದ್ದರೆ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಿ ಎಂದು ಸಲಹೆ ನೀಡಿದ್ದಾರೆ.

ದುಡ್ಡು ತಿನ್ನಲು ಸಾವು ಸಾಧನ ಅಂದುಕೊಂಡಿದೆ ಈ ರಾಜ್ಯ ಸರ್ಕಾರ. ಜನರ ಆರೋಗ್ಯ , ಬದುಕಿನ ಬಗ್ಗೆ ಕಾಳಜಿ‌ ಇದ್ದರೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯದ ಮೂಲಕ ಬದುಕನ್ನ ಕಟ್ಟುಕೊಡಲಿ. ಪ್ರವಾಸೋದ್ಯಮದ ಹೆಸರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೇಡ ಎಂದಿದ್ದಾರೆ.

ಸರಳ ದಸರಾ ಎಂದರೆ ಇವರಿಗೆ ಹದಿನೈದು ಕೋಟಿ. ಅದ್ದೂರಿ ದಸರಾ ಎಂದರೆ ಅದೆಷ್ಟು ಕೋಟಿಯೋ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ನಂಜರಾಜೇ ಅರಸ್, ದಸರಾ ಬದಲು ಜನರಿಗೆ ವೈದ್ಯಕೀಯ ಸೌಲಭ್ಯ ನೀಡಲು‌ ಮುಂದಾಗಿ. ಯಾಕೆ ಈ ರೀತಿಯ ಮನೆಹಾಳು ಕೆಲಸ ಮಾಡಲು ಹೊರಟಿದೆ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!