ಹುಬ್ಬಳ್ಳಿಯ ಅಶೋಕನಗರದ ಪೋಲೀಸರು, ಗಾಂಜಾ ಮಾರಾಟದ ಜಾಲವನ್ನು ಬೇಧಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 1.66 ಲಕ್ಷ ಮೌಲ್ಯದ 3 ಕೆಜಿ 336 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕೇಶವಾಪುರದ ಶ್ರೀನಿವಾಸ್ ಗುರುದಾಸ್ ಬಾಬುರಾವ್ ಹಾಗೂ ಶಬರಿನ ನಗರದ ಜವಾಹರಲಾಲ್ ಬಂಧಿತ ಆರೋಪಿಗಳು. ಇವರಿಬ್ಬರೂ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಬಳಿ ಗಾಂಜಾ ಮಾರುತ್ತಿದ್ದುದನ್ನು ಮಾಹಿತಿ ಮೂಲಕ ಖಚಿತ ಪಡಿಸಿಕೊಂಡ ಅಶೋಕ ನಗರದ ಪೋಲೀಸರು ದಾಳಿ ಮಾಡಿದ್ದರು.
ಇನ್ಸ್‌ಪೆಕ್ಟರ್ ರವಿಚಂದ್ರ. ಡಿ.ಬಿ, ನೇತೃತ್ವದಲ್ಲಿ ಸಬ್‌ಇನ್ಸ್‌ಪೆಕ್ಟರ್ ಶ್ರೀದೇವಿ, ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳಾದ ಎನ್.ಸಿ. ಪಾಟೀಲ್, ಆರ್.ಎಸ್. ಮರಿಗೌಡರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು. ಬಂಧಿತರಿಂದ, ಬೈಕ್, ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು