ಐಪಿಎಲ್ 20-20ಯ 21 ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 56 ರನ್‌ಗಳ ಭರ್ಜರಿ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ಅವರ ಆರಂಭ ಉತ್ತಮವಾಗಿತ್ತಾದರೂ ಶುಭಮನ್ ಗಿಲ್ ಅವರು ಕೇವಲ 11 ರನ್‌ಗಳಿಗೆ ಶಾರ್ದೂಲ್ ಅವರ ಬಲ್‌ನಲ್ಲಿ ಕ್ಯಾಚ್ ನೀಡಿಬಿಟ್ಟರು. ಆಗ ತಂಡವನ್ನು ಗೆಲುವಿನ ದಂಡೆ ಮುಟ್ಟಿಸಲು ಶತಾಯ ಗತಾಯ ಪ್ರಯತ್ನಿಸಿದ್ದು ರಾಹುಲ್ ತ್ರಿಪಾಠಿ 51 ಎಸೆತಗಳಲ್ಲಿ 81 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿ ತಂಡ ಇಂದಿನ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಉಳಿದ ಬ್ಯಾಟ್ಸ್‌ಮನ್‌ಗಳು ಹೀಗೆ ಬಂದು ಹಾಗೆ ಹೋದರು. ಚೆನ್ನೈ ತಂಡದ ಬೌಲರ್‌ಗಳಾದ ಶಾರ್ದುಲ್ ಠಾಕೂರ್, ಡ್ವೇನ್ ಬ್ರಾವೋ, ಕರ್ಣ್ ಶರ್ಮಾ, ಸ್ಯಾಮ್ ಅವರ ಬೌಲಿಂಗ್ ಕೆಕೆಆರ್ ತಂಡಕ್ಕೆ ದೊಡ್ಡ ಪೈಪೋಟಿಯೇ ಆಗಿತ್ತು. ಕೋಲ್ಕತ್ತ ತಂಡವು 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ಇತ್ತ 168 ರನ್‌ಗಳ ಮೊತ್ತದ ಹಿಂದೆ ಹೊರಟ ಚೆನ್ನೈ ಅಂತಹ ಚಮತ್ಕಾರವನ್ನೇನೂ ಮಾಡಲಿಲ್ಲ. ಚೆನ್ನೈ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡು ಪ್ಲೆಸ್ಸಿಸ್ ಅವರು ಉತ್ತಮ ಜೊತೆಯಾಟ ಆರಂಭ ಮಾಡಿದ್ದರು. ಆದರೆ ಕೇವಲ 17 ರನ್‌ಗಳಿಗೆ ಪ್ಲೆಸ್ಸಿಸ್ ಔಟಾದರು. ವ್ಯಾಟ್ಸನ್ ಅವರು 40 ಎಸೆತಗಳಿಗೆ 50 ರನ್ ಗಳಿಸಿದರು. ಪ್ಲೆಸಿಸ್ ಅವರ ನಂತರ ಬಂದ ಅಂಬಾಟಿ ರಾಯುಡು ಅವರು, 30 ರನ್‌ಗಳ ಸಮಾಧಾನಕರ ಮೊತ್ತವನ್ನು ತಂಡಕ್ಕೆ ನೀಡಿದರು. ಕೆಕೆಆರ್ ತಂಡದಿಂದ ದಿಟ್ಟ ಬೌಲಿಂಗ್ ದಾಳಿಯನ್ನೂ ಸಹ ಸಿಎಸ್‌ಕೆ ಎದುರಿಸಲಿಲ್ಲ. ಚೆನ್ನೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಮಾತ್ರ ಗಳಿಸಿ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ