February 21, 2026

Newsnap Kannada

The World at your finger tips!

ibrahim 1

ಕಾಂಗ್ರೆಸ್​ ಹೈಕಮಾಂಡ್ ನಿಂದ ಶಾಕ್ – ಹುಸಿಯಾದ ಸಿಎಂ ಇಬ್ರಾಹಿಂ ನಿರೀಕ್ಷೆ- ಜೆಡಿಎಸ್ ನತ್ತ ಹೆಜ್ಜೆ ?

Spread the love

ಕಾಂಗ್ರೆಸ್ ಹೈ ಕಮಾಂಡ್ ಇಬ್ರಾಹಿಂ ಸಾಹೇಬ್ರಿಗೆ ಶಾಕ್ ನೀಡಿದೆ, ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್ ಪಾಟೀಲ್‌ ನಿವೃತ್ತಿಯಿಂದ ತೆರವಾದ ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ, ಬಿ.ಕೆ ಹರಿಪ್ರಸಾದ್‌ ನೇಮಕ ಮಾಡಲಾಗಿದೆ.
ಈ ನೇಮಕದಿಂದ ಇಬ್ರಾಹಿಂಗೆ ನಿರೀಕ್ಷೆ ಹುಸಿಯಾಗಿದೆ. ಇಬ್ರಾಹಿಂ ಜೆಡಿಎಸ್ ನತ್ತ ಹಾಕುವ ಹೆಜ್ಜೆಗಳು ಬಲವಾಗಿ ಮೂಡುತ್ತಿವೆ .

ಈ ನಡುವೆ ಎಂ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನಕ್ಕೆ ಪ್ರಕಾಶ್‌ ಸಿಂಗ್‌ ರಾಠೋಡ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕೆ. ಗೋವಿಂದ ರಾಜ್‌ ಅವರನ್ನು ವಿಧಾನ ಪರಿಷತ್‌ನ ಉಪ ನಾಯಕನಾಗಿ ಆಯ್ಕೆ ಮಾಡಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆ ಮತ್ತು ಪರಿಷತ್​​ಗೆ ಇಬ್ಬರು ಹಿಂದುಳಿದ ವರ್ಗದ ನಾಯಕರಿಗೆ ವಿಪಕ್ಷ ಸ್ಥಾನ ಕಲ್ಪಿಸಲಾಗಿದೆ. ಇನ್ನು, ಇದೇ ಸ್ಥಾನದ ಆಕಾಂಕ್ಷಿಯಾಗಿದ್ದ ಸಿ.ಎಂ.ಇಬ್ರಾಹಿಂ ನಿರೀಕ್ಷೆ ನೀರುಪಾಲಾಗಿದೆ. ಮುಂದಿನ ಇಬ್ರಾಹಿಂ ಹೆಜ್ಜೆ ಕುತೂಹಲ ಮೂಡಿಸಿವೆ.

error: Content is protected !!