ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಿಸಿ. ನಂತರ ಯಾರು ಉಳಿಯುತ್ತಾರೆ, ಯಾರು ಹೋಗುತ್ತಾರೆ ಕಾದು ನೋಡೋಣ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲು ಹಾಕಿದ್ದಾರೆ
ಸುದ್ದಿಗಾರರ ಜೊತೆ ಮಾತನಾಡಿದ ರವಿ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಇಬ್ಬರಲ್ಲಿ ಯಾರ ಹೆಸರನ್ನು ಘೋಷಿಸಿದರೂ ಒಬ್ಬರು ಹೊರಗೆ ಬರುತ್ತಾರೆ. ಇಬ್ಬರಲ್ಲಿ ಒಬ್ಬರನ್ನು ಮಾಡಿದರೆ ಸೇಡು ತೀರಿಸಿಕೊಳ್ಳಲು ಪರಮೇಶ್ವರ್ ಅವರೇ ಹೊರಗೆ ಬರುತ್ತಾರೆ ಎಂದರು.
ಕೇಡರ್ ಆಧಾರಿತ ಪಾರ್ಟಿ, ನಮ್ಮದು ಕಾಂಗ್ರೆಸಿನಷ್ಟು ದುರ್ಬಲ ಪಕ್ಷವಲ್ಲ. ಕಾಂಗ್ರೆಸ್ ಅವರಿಗೆ ಅವರ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲು ಆಗಲಿಲ್ಲ, ಸೆಳೆಯುವುದು ಎಲ್ಲಿಂದ ಬಂತು ? ಅವರ ಶಾಸಕರನ್ನೇ ಏಕೆ ಉಳಿಸಿಕೊಳ್ಳಲಾಗಲಿಲ್ಲ ಎನ್ನುವುದನ್ನು ಕಾಂಗ್ರೆಸ್ ರಿಸರ್ಚ್ ಮಾಡಬೇಕು. ನಮ್ಮವರು ಏಕೆ ಪಾರ್ಟಿ ಬಿಟ್ಟರು ಅಂತ ಸಂಶೋಧನ ತಂಡ ರಚನೆ ಮಾಡಿ ಅಧ್ಯಯನ ಮಾಡಲಿ. ಆಗ ಸೆಳೆಯಬಹುದೋ, ಹೋಗುತ್ತಾರೋ, ಬರುತ್ತಾರೋ ಗೊತ್ತಾಗುತ್ತದೆ ಎಂದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು