March 14, 2026

Newsnap Kannada

The World at your finger tips!

election , news , politics

Bommai sets stage for JDS-BJP alliance during 'Loka' elections 'ಲೋಕಾ 'ಚುನಾವಣೆ ವೇಳೆಗೆ ಜೆಡಿಎಸ್ - ಬಿಜೆಪಿ ಮೈತ್ರಿಗೆ ವೇದಿಕೆ ಸಜ್ಜು - ಬೊಮ್ಮಾಯಿ

ಸಂಪುಟ ಪುನಾರಚನೆ ವರಿಷ್ಠರು ನಿರ್ಧರಿಸುತ್ತಾರೆ: ಬೊಮ್ಮಾಯಿ

Spread the love

ಸಂಪುಟ ಪುನಾರಚನೆಯು ವರಿಷ್ಠರ ಗಮನದಲ್ಲಿ ಇದೆ. ಪುನಾರಚನೆ ಯಾವಾಗ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಆಕಾಂಕ್ಷಿಗಳು ಸಚಿವ ಸ್ಥಾನ ಕೇಳುವುದು ಸಹಜ. ಈ ಬಗ್ಗೆ ವರಿಷ್ಠರು ಯಾವಾಗ ಕರೆಯುತ್ತಾರೋ ಆಗ ಭೇಟಿ ಮಾಡಿ ತೀರ್ಮಾನಿಸುತ್ತೇನೆ ಎಂದು ಹೇಳಿದರು.

ನಿಗಮ ಮಂಡಳಿ ವಿಚಾರವಾಗಿ ಮಾತನಾಡಿ, ಪಕ್ಷದ ವೇದಿಕೆಯಲ್ಲಿ ರಾಜ್ಯಾಧ್ಯಕ್ಷರು ಜೊತೆ ಚರ್ಚೆ ಮಾಡಿ ಹೇಳುತ್ತಾರೆ. ಆ ನಂತರ ನಿಗಮ ಮಂಡಳಿ ನೇಮಕ ಆಗುತ್ತದೆ. ಈ ಬಗ್ಗೆ ನನ್ನ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದರು

ಬೆಳಗಾವಿ ರಹಸ್ಯ ಸಭೆ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಅದು ರಹಸ್ಯ ಸಭೆ ಅಂತಾ ನೀವು ಹೇಳುತ್ತೀರಾ. ಆದರೆ ಯಾರಾದರೂ ಸೇರಿದರೆ ಅದು ರಹಸ್ಯ ಸಭೆ ಆಗುತ್ತಾ? ಕಾಂಗ್ರೆಸ್‍ನಲ್ಲೂ ಹಲವು ಸಭೆಗಳು ಆಗುತ್ತವೆ. ಅವುಗಳನ್ನು ರಹಸ್ಯ ಸಭೆ ಅಂತಾ ಹೇಳುತ್ತೀರಾ ಎಂದು ಪ್ರಶ್ನಿಸಿದರು.

error: Content is protected !!