ಬಿಹಾರದಲ್ಲಿ ಚುಣಾವಣಾ ತಯಾರಿ ಬಹಳ ಜೋರಾಗಿದೆ. ಪ್ರತಿಕ್ಷಣಕ್ಕೂ ಆಸಕ್ತಿ ಮೂಡಿಸುತ್ತಿದೆ. ಈಗ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ.
ಜೆಡಿಯು ಪಕ್ಷ 122 ಸೀಟುಗಳನ್ನು ಗಳಿಸಿಕೊಂಡಿದ್ದರೆ, ಬಿಜೆಪಿ ಪಕ್ಷವು 121 ಸೀಟುಗಳನ್ನು ಸೀಟುಗಳನ್ನು ಗಳಿಸಿಕೊಂಡಿದೆ. ಇತರೆ ಎನ್‌ಡಿಎ ಮೈತ್ರಿ ಪಕ್ಷಗಳಾದ ಹೆಚ್ಎಮ್‌ಗೆ ಜೆಡಿಯು 7 ಕ್ಷೇತ್ರಗಳನ್ನು ಹಾಗೂ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿಗೆ ಬಿಜೆಪಿ ಪಕ್ಷ ತನ್ನ ನಿರ್ಧಾರದಂತೆ ಕೆಲವು ಸೀಟುಗಳನ್ನು ಬಿಟ್ಟುಕೊಡಲಿದೆ.
‘ಚುಣಾವಣೆಯಲ್ಲಿ ಯಾವುದೇ ಪಕ್ಷ ಎಷ್ಟೇ ಮತಗಳನ್ನು ಪಡೆದರೂ ನಿತೀಶ್ ಅವರೇ ನಮ್ಮ ಮುಖ್ಯಮಂತ್ರಿ’ ಎಂದು ಉಪಮುಖ್ಯಮಂತ್ರಿ ಸುಶೀಲ್ ಸೀಟು ಹಂಚಿಕೆಯ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು.
ಈ ಹಿಂದೆ ಎನ್‌ಡಿಎ ಮೈತ್ರಿ ಕೂಟ ದಲ್ಲಿದ್ದ ಎಲ್‌ಜೆಪಿಯು ಜೆಡಿಯು ಪಕ್ಷದ ಮುಖಂಡ ನಿತೀಶ್ ಕುಮಾರ್ ಜೊತೆಗಿನ ಸಹಕಾರದ ಕೊರತೆಯಿಂದ ಎನ್‌ಡಿಎ ತೊರೆದು ಹೋಗಿತ್ತು. ಆದರೆ ಬಿಜೆಪಿಯೊಂದಿಗೆ ತನ್ನ ಬಾಂಧವ್ಯ ಮುಂದುವರೆಸುವದಾಗಿ ಎಲ್‌ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ಹೇಳಿದ್ದರಾದರೂ ಅದನ್ನು ಬಿಜೆಪಿ ತಿರಸ್ಕರಿಸಿದೆ. *‘ಯಾವುದೇ ಕಾರಣಕ್ಕೂ ಹಿಂಬಾಗಿಲಿನ ಮೂಲಕ ಎಲ್‌ಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವದಿಲ್ಲ ಎಂದು ಹೇಳಿದೆ.
ನಿತೀಶ್ ಕುಮಾರ್ ಅವರ ನಾಯಕತ್ವದಲ್ಲೇ ಬಿಜೆಪಿ ಚುಣಾವಣೆ ಎದುರಿಸಲಿದೆ. ಅವರ ವಿರುದ್ಧ ನಿಲ್ಲುವವರು ಯಾರೂ ಎನ್‌ಡಿಎ ಮೈತ್ರಿಕೂಟದಲ್ಲಿರುವದಿಲ್ಲ’ ಎಂದಿದೆ.
ಬಿಜೆಪಿ. ಮುಂದುವರೆದ ಅದು ‘ಎಲ್‌ಜೆಪಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರ ಹೋದ ಕಾರಣಕ್ಕಾಗಿ, ಪ್ರಧಾನಿ ಮೋದಿಯವರೊಂದಿಗಿನ ಎಲ್‌ಜೆಪಿ ಪಕ್ಷದ ನಾಯಕರ ಫೋಟೋಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದೆ. ಅಲ್ಲದೇ ಎಲ್‌ಜೆಪಿಯು ಜೆಡಿಯು ಪಕ್ಷದ ಅಭ್ಯರ್ಥಿಗಳ ವಿರುದ್ದ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ.
ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ಮೂರು ಹಂತಗಳಲ್ಲಿ ಚುನಾವಣೆ
ನಡೆಯಲಿದೆ. ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.
ಈ ಹಿಂದೆ ಚುಣಾವಣೆಯಲ್ಲಿ ಚುಣಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಇದ್ದಾಗ ಎನ್‌ಡಿಎ ಮತ್ರಿಯಿಂದ ಹೊರಬಿದ್ದಿದ್ದ ಜೆಡಿಯು ಮತ್ತು ಅದರ ಮುಖಂಡ ನಿತೀಶ್ ಕುಮಾರ್ ಕಾಂಗ್ರೆಸ್ ಜೊತೆ ಸೇರಿ ಮಹಾಘಟಬಂಧನ್ ರಚಿಸಿದ್ದರು. ಈಗ ಚುಣವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಇದ್ದರೆ ಜೆಡಿಯು ನಡೆಯನ್ನು ಕಾಯ್ದು ನೋಡಬೇಕಿದೆ. ಪ್ರಸ್ತುತ ಎಲ್‌ಜೆಪಿ ಮೈತ್ರಿಯಿಂದ ಹೊರ ನಡೆದಿರುವುದು ಚುಣಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ