ಹತ್ರಾಸ್‌ನಲ್ಲಿನ ಯುವತಿಯ ಅತ್ಯಾಚಾರ ಮತ್ತು ಸಾವಿಗೆ ಸಂಬಂಧಿಸಿದಂತೆ ಪ್ರಮುಖ ತಿರುವು ಸಿಕ್ಕಿದೆ.
ಸಂತ್ರಸ್ತೆಯ ಸಹೋದರ ಮತ್ತು ಪ್ರಕರಣದ ಮುಖ್ಯ ಆರೋಪಿಯ ನಡುವೆ ಅತ್ಯಾಚಾರಕ್ಕೂ ಮೊದಲು 104 ಬಾರಿ ಫೋನ್ ಸಂಭಾಷಣೆ ನಡೆದ ವಿಚಾರ ಬೆಳಕಿಗೆ ಬಂದಿದೆ. ಇದು ಪ್ರಕರಣಕ್ಕೆ ಸಿಕ್ಕ ಪ್ರಮುಖ ಅಂಶವಾಗಿದೆ.
ಈ ಬಗ್ಗೆ ದಾಖಲೆ ಸಂಗ್ರಹ ಮಾಡಿರುವ ತನಿಖಾಧಿಕಾರಿಗಳು ಸಂತ್ರಸ್ತೆಯ ಸಹೋದರ ಹಾಗೂ ಮುಖ್ಯ ಆರೋಪಿಗೆ ಪ್ರಕರಣಕ್ಕಿಂತ ಮುಂಚಿನಿಂದಲೂ ಸಂಪರ್ಕವಿತ್ತು ಎನ್ನಲಾಗುತ್ತಿದೆ. ಎಸ್‌ಐಟಿ ದಳದವರು ಕರೆ ದಾಖಲೆಗಳನ್ನು ಪರಿಶೀಲಿಸಿದ ನಂತರ ಮುಖ್ಯ ಆರೋಪಿ ಸಂದೀಪ್ ಸಿಂಗ್‌ಗೆ ಸಂತ್ರಸ್ತೆಯ ಸಹೋದರನಿಂದ 62 ಔಟ್‌ಗೋಯಿಂಗ್ ಕರೆ ಹಾಗೂ ಸಂದೀಪನಿಂದ 42 ಇನ್‌ಕಮಿಂಗ್ ಕರೆ, ಒಟ್ಟು 104 ಕರೆಗಳ ಪಟ್ಟಿ ಕರೆ ದಾಖಲೆಯಲ್ಲಿ ನಮೂದಾಗಿದೆ.
ಸದ್ಯ ತನಿಖಾಧಿಕಾರಿಗಳು ಯುವತಿಯ ಸಹೋದರನನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
More Stories
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಕೆರೆಗೆ ಉರುಳಿದ ಕಾರು : ಇಬ್ಬರ ಸಾವು
ಮಾರ್ಚ್ನಲ್ಲಿ ರಾಜ್ಯ ಬಜೆಟ್ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ