March 13, 2026

Newsnap Kannada

The World at your finger tips!

b c nagesh

Recruitment of 15 thousand graduate primary teachers: Provisional selection list released - Minister Nagesh 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ - ಸಚಿವ ನಾಗೇಶ್

ಬೆಂಗಳೂರಿನಲ್ಲಿ ಮಾತ್ರ ಜ. 29 ರವರೆಗೆ ಶಾಲೆ ಬಂದ್ : ಜಿಲ್ಲಾ ಶಾಲೆಗಳಿಗೆ ರೂಲ್ಸ್ ಬೇರೆ : ನಾಗೇಶ್

Spread the love

ವೀಕೆಂಡ್​​ ಕರ್ಫ್ಯೂ ತೆರವುಗೊಳಿಸಿದರೂ ಬೆಂಗಳೂರಲ್ಲಿ ಮಾತ್ರ ಜ.29 ರವರೆಗೂ ಶಾಲೆಗಳನ್ನು ಬಂದ್​​ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದರು.

ಸಿಎಂ ಬಸವರಾಜ್​​​ ನೇತೃತ್ವದಲ್ಲಿ ನಡೆದ ಕೊರೊನಾ ಸಭೆ ಬಳಿಕ ಮಾತಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, 29ರ ನಂತರ ಬೆಂಗಳೂರಿನಲ್ಲಿ ಶಾಲೆ ಓಪನ್​ ಮಾಡೋದರ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಬೆಂಗಳೂರು ಬಿಟ್ಟು ಬೇರೆ ಎಲ್ಲಾ ಕಡೆ ಅಧಿಕಾರಿಗಳ ಅಭಿಪ್ರಾಯ ಪಡೆದು ಪಾಸಿಟಿವ್ ರೇಟ್ ನೋಡಿಕೊಂಡು ಶಾಲೆ ಆರಂಭ ಮಾಡುತ್ತೇವೆ. ಬೆಂಗಳೂರಿನಲ್ಲಿ ಪಾಸಿಟಿವ್ ಜಾಸ್ತಿ ಇದೆ. ಹೀಗಾಗಿ ಮುಂದಿನ ಶುಕ್ರವಾರ ಬೆಂಗಳೂರಲ್ಲಿ ಶಾಲೆ ತೆರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ಐದು ಮಕ್ಕಳಿಗೆ ಸೋಂಕು ಬಂದ್ರೆ, ಮೂರು ದಿನ ಶಾಲೆ ಬಂದ್ ಮಾಡಲಾಗುವುದು. ಇಪ್ಪತೈದು ಮಕ್ಕಳಿಗೆ ಸೋಂಕು ಬಂದ್ರೆ ಏಳು ದಿನ ಶಾಲೆ ಬಂದ್​​ ಮಾಡಲಾಗುವುದು. ಇದು ಜಿಲ್ಲಾವಾರು ಶಾಲೆಗಳಿಗೆ ಅನ್ವಯಿಸುತ್ತದೆ. ಆದ್ರೆ ಬೆಂಗಳೂರು ಶಾಲೆಗಳು‌ ಸದ್ಯಕ್ಕೆ ಆರಂಭವಿಲ್ಲ ಎಂದು ಹೇಳಿದರು.

error: Content is protected !!