January 14, 2025

Newsnap Kannada

The World at your finger tips!

WhatsApp Image 2022 01 19 at 8.42.13 AM

INS ರಣವೀರ್ ನೌಕೆಯಲ್ಲಿ ಸ್ಫೋಟ- ಮೂವರು ಸಿಬ್ಬಂದಿ ಸಾವು

Spread the love

ಭಾರತೀಯ ನೌಕೆ ರಣವೀರ್‌ನಲ್ಲಿ ಸಂಭವಿಸಿದ ಸ್ಪೋಟದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಐಎನ್‍ಎಸ್ ರಣವೀರ್ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‍ನಿಂದ ಕ್ರಾಸ್ ಕೋಸ್ಟ್ ಕಾರ್ಯಾಚರಣೆ ನಿಮಿತ್ತ ನಿಯೋಜಿಸಲಾಗಿತ್ತು.

ಶೀಘ್ರದಲ್ಲೇ ಬೇಸ್ ಪೋರ್ಟ್‍ಗೆ ಮರಳಬೇಕಿತ್ತು. ಈ ಅವಘಡ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ 11 ಮಂದಿ ನಾವಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟ ಸಂಭವಿಸಿದ ತಕ್ಷಣವೇ ಹಡಗಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!