ನಂದಿನಿ ಹಾಲಿನ ದರ 3 ರು ಏರಿಕೆಗೆ ಚಿಂತನೆ- ಸಿಎಂ ಭೇಟಿಗೆ ಕೆಎಂಎಫ್ ಅಧ್ಯಕ್ಷರ ನಿರ್ಧಾರ

Team Newsnap
1 Min Read

ನಂದಿನಿ ಹಾಲಿನ ದರ ಏರಿಕೆಗೆ ಜಿಲ್ಲಾ ಹಾಲು ಒಕ್ಕೂಟಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ದರ 3ರು ಏರಿಕೆಗೆ ಕೆಎಂಎಫ್​ ಚಿಂತನೆ ನಡೆಸಿದೆ ಎಂದು. ಗೊತ್ತಾಗಿದೆ.

ಈಗ 37 ರೂ. ಇರುವ ಹಾಲಿನ ದರವನ್ನು 40 ರೂ. ಏರಿಕೆಗೆ ಚಿಂತನೆ ನಡೆದಿದೆ ಹೆಚ್ಚಳ ಮಾಡುವ 3 ರುಗಳಲ್ಲಿ 2 ರು ಹಣವನ್ನು ರೈತರಿಗೆ ನೀಡುವ ಚಿಂತನೆ ಮಾಡಲಾಗಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಲು ನಿರ್ಧಾರ ಮಾಡಿದ್ದಾರೆ.

ಒಂದು ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು. ಸಿಎಂ ಒಪ್ಪಿದರೆ ಮಾತ್ರ ಹಾಲಿನ ದರ ಏರಿಕೆ ಮಾಡಲು ನಿರ್ಧರಿಸಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ತಿಳಿಸಿದ್ದಾರೆ.

Share This Article
Leave a comment