March 16, 2026

Newsnap Kannada

The World at your finger tips!

nadoja kanavi

ನಾಡೋಜ ಚನ್ನವೀರ ಕಣವಿಗೆ ಕೊರೊನಾ ಸೋಂಕು ದೃಢ

Spread the love

ಧಾರವಾಡದ ಹಿರಿಯ ಕವಿ ನಾಡೋಜ ಚನ್ನವೀರ‌ ಕಣವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಚೆಂಬೆಳಕಿನ ಕವಿ ಎಂದೇ ಖ್ಯಾತಿ‌ ಪಡೆದಿರುವ 93 ವರ್ಷದ ಕಣವಿ, ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದರು.

ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ.ಸದ್ಯ ಚನ್ನವೀರ ಕಣವಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನ 100 ಇದ್ದ ಕೊರೊನಾ ಕೇಸ್ ಈಗ 400ರ ಗಡಿಗೆ ಬಂದು ತಲುಪಿದೆ.
ಗುರುವಾರ ಧಾರವಾಡದಲ್ಲಿ 399 ಮಂದಿಗೆ ಸೋಂಕು ಬಂದಿತ್ತು. ಸದ್ಯ 1,097 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದೆ.

error: Content is protected !!