February 21, 2026

Newsnap Kannada

The World at your finger tips!

dks police

ಮಧ್ಯರಾತ್ರಿ ಡಿಕೆಶಿ ನಿವಾಸಕ್ಕೆ ಪಾದಯಾತ್ರೆ ನಿಲ್ಲಿಸಿ ಎಂಬ ನೋಟಿಸ್ ಅಂಟಿಸಿದ ಪೊಲೀಸರು..!

Spread the love

ಸರ್ಕಾರದ ಆದೇಶದಂತೆ ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಕನಕಪುರ ನಿವಾಸ ಗೇಟ್ ಗೆ ಮಧ್ಯರಾತ್ರಿ ನಂತರ ರಾಮನಗರ ಎಸಿ, ಡಿವೈಎಸ್​ಪಿ ನೋಟಿಸ್​ ಅಂಟಿಸಿ ಬಂದಿದ್ದಾರೆ

ಕನಕಪುರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿ ಗೇಟ್​ ಮುಂದೆ ನೋಟಿಸ್ ಅಂಟಿಸಿ ಬಂದಿದ್ದಾರೆ.

ಡಿಕೆ ಶಿವಕುಮಾರ್ ನೋಟಿಸ್​ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆ ಗೇಟ್​ಗೆ ನೋಟಿಸ್ ಅಂಟಿಸಿದ್ದಾರೆ ಎಂದು ಗೊತ್ತಾಗಿದೆ

ಇಂದು ಬೆಳಗ್ಗೆಯಿಂದ ಕನಕಪುರದಲ್ಲಿರುವ ಡಿಕೆಶಿ ನಿವಾಸದಲ್ಲಿ ಇರುತ್ತಿದ್ದ ಜನಸಂಖ್ಯೆ ಕಡಿಮೆ ಆಗಿದೆ. ಪಾದಯಾತ್ರೆ ಆರಂಭದ ದಿನದಿಂದಲೂ ಜನರ ದಂಡೇ ಸೇರುತ್ತಿತ್ತು. ಕೋರ್ಟ್ ಆದೇಶದ ಬೆನ್ನಲ್ಲೆ ಪಾದಯಾತ್ರೆ ಬಗ್ಗೆ ಅನಿಶ್ಚಿತತೆ ಮೂಡಿದೆ.

ಈ ಹಿನ್ನೆಲೆಯಲ್ಲಿ ಡಿಕೆಎಸ್ ನಿವಾಸದ ಬಳಿ ನಾಯಕರು, ಕಾರ್ಯಕರ್ತರು ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

error: Content is protected !!