ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಚಕರು ಪರಸ್ಪರ ಬಡಿದಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ದೇವರಗುಡ್ಡದ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ಜರುಗಿದೆ.
ಆರತಿ ತಟ್ಟೆ ಹಿಡಿದು ಪೂಜೆ ಮಾಡುತ್ತಿದ್ದ ಪೂಜಾರಿಯ ಚಿಕ್ಕಪ್ಪ ಮತ್ತು ಪೂಜಾರಿಯನ್ನು ದೂಡಾಡಿ,ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಪ್ರಧಾನ ಅರ್ಚಕರು ಯತ್ನಿಸಿದ್ದಾರೆ.
ಈ ವೇಳೆ ಪ್ರಧಾನ ಅರ್ಚಕ ಸಂತೋಷ್ ಭಟ್ಟ ಗೂರೂಜಿ ಮೇಲೆ ಹಲ್ಲೆ ಮಾಡಲು ಪೂಜಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಕಾಶ್, ಶಿವಪ್ಪ,ಸುನೀಲ್, ಸುಭಾಷಪ್ಪ,ಮೃತ್ಯಂಜಯ, ಗುರುರಾಜ,ಮಲ್ಲಪ್ಪ ಹಾಗೂ ನಾಗರಾಜ್ ಬಣಕಾರ ಕುಟುಂಬಸ್ಥರು ಪೂಜೆ ನಡೆಸಿದ್ದ ವೇಳೆ ಆಗಮಿಸಿದ ಸಂತೋಷ ಭಟ್ ಗೂರುಜಿ. ದೇವಸ್ಥಾನ ನಮ್ಮ ಸುಪರ್ದಿಯಲ್ಲಿದೆ ಇಲ್ಲಿ ಪೂಜೆ ಮಾಡ್ಬೇಡಿ ಎಂದಿದ್ದಾರಂತೆ.
ನಮ್ಮ ಕುಟುಂಬ ಅನಾದಿ ಕಾಲದಿಂದ ಸ್ವಾಮಿ ಪೂಜೆ ಮಾಡುತ್ತಿದೆ ಎಂದು ಶಿವಪ್ಪ ಬಣಕಾರ ಕುಟುಂಸ್ಥರು ವಾದಿಸಿದ್ದಾರೆ. ಈ ಮಾತುಕತೆ ತಾರಕಕ್ಕೇರಿದ್ದು ಪರಸ್ಪರರ ನಡುವೆ ಬಡಿದಾಟ ನಡೆದಿದೆ ಎನ್ನಲಾಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಖೋಟಾ ನೋಟ್ ಪ್ರಿಂಟ್ ಮಾಡುತ್ತಿದ್ದ ಅಪ್ಪ – ಮಗನಬಂಧನ
ಈ 10 ಸಂಖ್ಯೆಯಿಂದ ಬರುವ ಕರೆ ಸ್ವೀಕರಿಸಬೇಡಿ – ಸ್ಕ್ಯಾಮರ್ಗಳ ಹೊಸ ತಂತ್ರ!
ರಾಜ್ಯದಲ್ಲಿ ಮಿತಿಮೀರಿದ ಅತ್ಯಾಚಾರ, ಸುಲಿಗೆ ಪ್ರಕರಣಗಳು: ಆರ್. ಅಶೋಕ್ ಆಕ್ರೋಶ