ಟಫ್ ರೂಲ್ಸ್​ಗೆ ಸಹಕಾರ ಕೊಡಿ – ಇಲ್ಲದಿದ್ರೆ ಮತ್ತೆ ಲಾಕ್ಡೌನ್ : ಸಚಿವ ಅಶೋಕ್ ಎಚ್ಚರಿಕೆ

Team Newsnap
1 Min Read

ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದಿದ್ದರೆ ಪಶ್ಚಿಮ ಬಂಗಾಳ, ದೆಹಲಿಯಂತೆ ನಾವೂ ಕೂಡ ಮತ್ತೆ ಲಾಕ್​ಡೌನ್ ಮೊರೆ ಹೋಗಬೇಕಾಗುತ್ತದೆ ಎಂದು ಸಚಿವ ಅಶೋಕ್ ಭಾನುವಾರ ಎಚ್ಚರಿಕೆ ನೀಡಿದರು.


ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಶೋಕ್ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಮತ್ತೊಂದು ಕಡೆ ಕೊರೊನಾ ಸೋಂಕಿನ ಪ್ರಮಾಣವೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಪಶ್ಚಿಮ ಬೆಂಗಾಲ ಮಹಾರಾಷ್ಟ್ರದಲ್ಲಿ ಮಿತಿ ಮೀರಿದ್ದು, ಕಠಿಣ ನಿಯಮ ಜಾರಿ ಆಗ್ತಿದೆ. ಮೂರನೇ ಅಲೆ ಬರೋದು ನಿಶ್ಚಿತವಾಗಿದೆ. ರೆಡ್​ಝೋನ್​ನಲ್ಲಿ ಬೆಂಗಳೂರು ಕೂಡ ಇದೆ. ಹೀಗಾಗಿ ಬೆಂಗಳೂರನ್ನು ಅಲರ್ಟ್​ ಮಾಡಬೇಕಾಗಿದೆ ಎಂದರು.

ಬೆಂಗಳೂರಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ವಿಧಿಸಿದರೆ ಆಸ್ಪತ್ರೆಗೆ ದಾಖಲಾಗೋದನ್ನು, ಜನ ಸಾವನ್ನು ನಾವು ತಡೆಯಬಹುದು. ಈ ಎಲ್ಲಾ ದೃಷ್ಟಿಯಿಂದ ನಾವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದರು

ಜನವರಿ 7ನೇ ತಾರಿಖಿನೊಳಗೆ ನಾವು ಟಫ್ ರೂಲ್ಸ್​ ಜಾರಿ ಬಗ್ಗೆ ನಿರ್ಧಾರ ಮಾಡಬೇಕಿದೆ.
ತಜ್ಞರು ಏನು ಹೇಳ್ತಾರೆ, ಅದನ್ನು ನಾವು ಯಥಾವತ್ತಾಗಿ ಜಾರಿ ಮಾಡ್ತೇವೆ. ಕಳೆದ ಬಾರಿ ಸಾವು-ನೋವುಗಳನ್ನ ನೋಡಿ ಅನುಭವಕ್ಕೆ ಬಂದಿದೆ. ಹೀಗಾಗಿ ಸೂಕ್ತ ತಯಾರಿ ಮಾಡಿಕೊಳ್ತೇವೆ. ಅದಕ್ಕಾಗಿ ವಿಶೇಷ ಸಭೆ ಮಾಡ್ತೇವೆ. ಎಲ್ಲರೂ ಕೂಡ ಟಫ್ ರೂಲ್ಸ್​ಗೆ ಸಹಕಾರ ಕೊಡಬೇಕು. ಇಲ್ಲದಿದ್ರೆ, ನಾವೂ ಕೂಡ ದೆಹಲಿ, ವೆಸ್ಟ್​ ಬೆಂಗಾಲ್, ಬಾಂಬೆ ರೀತಿ ಲಾಕ್​ಡೌನ್​ಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article
Leave a comment