February 19, 2026

Newsnap Kannada

The World at your finger tips!

p i

ಪಾಕಿಸ್ತಾನ, ಚೀನಾ ಸೈನಿಕರಿಗೆ ಹೊಸ ವರ್ಷದ ಶುಭಾಶಯ ಕೋರಿ ಸಿಹಿ ಹಂಚಿದ ಭಾರತೀಯ ಯೋಧರು

Spread the love

ಹೊಸ ವರ್ಷದ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪಡೆಯ ಯೋಧರು ಗಡಿಭಾಗಗಳಲ್ಲಿ ಪಾಕಿಸ್ತಾನ ಹಾಗೂ ಚೀನಾ ಸೈನಿಕರೊಂದಿಗೆ ಪರಸ್ಪರ ಸಿಹಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಪೂಂಚ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಎರಡು ದೇಶಗಳ ಯೋಧರು ಶನಿವಾರ ಪರಸ್ಪರ ಸಿಹಿ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

ಹೊಸ ವರ್ಷದ ಆರಂಭದಲ್ಲಿ ಪರಸ್ಪರ ನಂಬಿಕೆ ಮತ್ತು ಶಾಂತಿಯನ್ನು ಉತ್ತೇಜಿಸಲು ಭಾರತೀಯ ಸೇನೆಯು ಪೂಂಚ್‌ ಮತ್ತು ಮೆಂಧರ್‌ ಕ್ರಾಸಿಂಗ್‌ ಪಾಯಿಂಟ್‌ ಬಳಿ ಪಾಕಿಸ್ತಾನದ ಸೇನೆಯೊಂದಿಗೆ ಸಿಹಿ ಹಂಚಿ ವಿಶ್‌ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷದ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಕೆಲವು ಉಲ್ಲಂಘನೆಗಳನ್ನು ಹೊರತುಪಡಿಸಿದರೆ, ಈ ಒಪ್ಪಂದ ಗಡಿ ನಿವಾಸಿಗಳು ಮತ್ತು ರೈತರಿಗೆ ಯುದ್ಧ ಭೀತಿ ದೂರವಾಗಿದೆ.

error: Content is protected !!