2021ರಲ್ಲಿ 1 ಕೋಟಿ ಭಕ್ತರು ತಿರುಮಲಕ್ಕೆ ಭೇಟಿ – ಹುಂಡಿಯಲ್ಲಿ 833 ಕೋಟಿ ರು ಸಂಗ್ರಹ

Team Newsnap
1 Min Read
Second temple of 'Tirupati Thimmappa' opening in Chennai from March 17 ಮಾರ್ಚ್ 17 ರಿಂದ ಚೆನ್ನೈನಲ್ಲಿ ʻತಿರುಪತಿ ತಿಮ್ಮಪ್ಪʼನ ಎರಡನೇ ದೇವಾಲಯ ಪ್ರಾರಂಭ

ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ 2021 ರ ವರ್ಷದಲ್ಲಿ 833 ಕೋಟಿ ರೂಪಾಯಿ ಸಂಗ್ರಹವಾಗಿದೆ.

ತಿರುಪತಿ ದೇವಾಲಯದ (ಟಿಟಿಡಿ) ಮಂಡಳಿಯು ನಡೆಸಿದ ಹುಂಡಿ ಎಣಿಕೆಯಲ್ಲಿ 2021ರ ಜನವರಿ 1 ರಿಂದ ಡಿಸೆಂಬರ್ 30ರವರೆಗೂ 833 ಕೋಟಿ ರೂ. ಸಂಗ್ರಹವಾಗಿದೆ.

ಕೊರೊನಾ ಎರಡನೇ ಅಲೆಯ ನಂತರ ಈ ವರ್ಷದಲ್ಲಿ ಸುಮಾರು 1.4 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯ ಆಡಳಿತ ಮಂಡಳಿಯು 5.96 ಕೋಟಿ ಲಡ್ಡು ಪ್ರಸಾದವನ್ನು ಭಕ್ತರಿಗೆ ನೀಡಿದೆ ಮತ್ತು ಸುಮಾರು 1.37 ಕೋಟಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ 1.4 ಕೋಟಿ ಭಕ್ತರಲ್ಲಿ 48.75 ಲಕ್ಷ ಮಂದಿ ದೇವರಿಗೆ ಮುಡಿ ನೀಡಿದ್ದಾರೆ.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಬ್ರಹ್ಮರಥೋತ್ಸವಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ.

Share This Article
Leave a comment