December 27, 2024

Newsnap Kannada

The World at your finger tips!

yuvika

ಅಮ್ಮ ಅರ್ಚನಾಳ ಕೊಲೆಗೆ ಸಂಚು ರೂಪಿಸಿದ ಮಗಳು ಯುವಿಕಾ ರೆಡ್ಡಿ ಸೇರಿ 7 ಮಂದಿ ಬಂಧನ

Spread the love

ಅರ್ಚನಾ ರೆಡ್ಡಿ ಪ್ರಕರಣ ಸಂಬಂಧ ಆರೋಪಿ ನವೀನ್‍ಗೆ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಅರ್ಚನಾ ಮಗಳು ಯುವಿಕಾ ರೆಡ್ಡಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಅರ್ಚನಾ ರೆಡ್ಡಿ ಕೊಲೆಯಾಗುವ ದಿನ ಅಮ್ಮನ ಚಲನವಲನದ ಬಗ್ಗೆ ಯುವಿಕಾ ರೆಡ್ಡಿ, ನವೀನ್‍ಗೆ ಮಾಹಿತಿ ನೀಡಿದ್ದಾಳೆ.

ಈ ಬಗ್ಗೆ ತನಿಖೆ ವೇಳೆ ಗೊತ್ತಾಗುತ್ತಿದಂತೆ ಯುವಿಕಾ ರೆಡ್ಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಯುವಿಕಾ ಅಮ್ಮನ ಬಾಯ್ ಫ್ರೆಂಡ್ ನವೀನ್‍ನನ್ನು ಗುಟ್ಟಾಗಿ ಮದುವೆಯಾಗಿದ್ದಳು. ಈ ಹಿಂದೆ ಅರ್ಚನಾ ರೆಡ್ಡಿ ಜೊತೆಗೂ ನವೀನ್‍ಗೆ ಸಂಬಂಧವಿತ್ತು. ಇದು ತಿಳಿದಿದ್ದರು ಕೂಡ ನವೀನ್ ಜೊತೆ ಯುವಿಕಾ ರಿಜಿಸ್ಟ್ರಾರ್ ಮ್ಯಾರೇಜ್ ಆಗಿದ್ದಳು.

ಬಳಿಕ ಅಮ್ಮನ ಆಸ್ತಿಯನ್ನು ಹೊಡೆಯಬೇಕು ಅಂದರೆ ಅವಳು ಸಾಯಬೇಕು ಎಂದು ನಿರ್ಧರಿಸಿ ಅಮ್ಮನನ್ನು ಯುವಿಕಾ ಕೊಲೆ ಮಾಡಲು ಮುಂದಾಗಿದ್ದಳು.

ಈ ನಡುವೆ ಯುವಿಕಾ, ನವೀನ್‍ನನ್ನು ಮದುವೆ ಆಗಿರುವ ವಿಚಾರ ಅರ್ಚನಾಗೆ ತಿಳಿದಿದೆ. ಹಾಗಾಗಿ ಇಬ್ಬರನ್ನೂ ಬೇರೆ ಮಾಡಲು ಅರ್ಚನಾ ಓಡಾಡ್ತಾ ಇದ್ದಳು. ಇದನ್ನು ಸಹಿಸದೇ ಅಮ್ಮನನ್ನೇ ಕೊಲೆ ಮಾಡಲು ಯುವಿಕಾ ಮುಂದಾಗಿದ್ದಾಳೆ. ಅಂತೆಯೇ ನವೀನ್‍ಗೆ ಸಹಾಯ ಮಾಡಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಮಗಳ ಐಷಾರಾಮಿ ಜೀವನ:

ಯುವಿಕಾ ಐಷಾರಾಮಿ ಜೀವನ ಮಾಡೋದಕ್ಕೆ ಇಷ್ಟ ಪಡುತ್ತಾ ಇದ್ದಳು. ಆದರೆ ಹಣ ಮಾತ್ರ ಅರ್ಚನಾ ಕೊಡುತ್ತಾ ಇರಲಿಲ್ಲ . ಹಣಕ್ಕಾಗಿ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಯುವಿಕಾ, ನವೀನ್ ಮನೆಗೆ ಹೋಗಿ ಉಳಿದುಕೊಂಡಿದ್ದಳು.

ನವೀನ್ ಬಳಿ ಹಣ ಇರಲಿಲ್ಲ. ನವೀನ್ ಕೂಡ ಯಾವುದೇ ಕೆಲಸ ಮಾಡುತ್ತಾ ಇರಲಿಲ್ಲ. ಇದರಿಂದಾಗಿ ಯುವಿಕಾಗೆ ಯಾವುದೇ ಐಷಾರಾಮಿ ಜೀವನ ಮಾಡೋಕೆ ಆಗುತ್ತಿರಲಿಲ್ಲ. ಹಾಗಾಗಿ ಅಮ್ಮನನ್ನು ಕೊಂದರೆ ಎಲ್ಲಾ ಆಸ್ತಿ ನಮ್ಮ ಪಾಲಿಗೆ ಬರುತ್ತೆ ಅಂದುಕೊಂಡು ನವೀನ್ ಜೊತೆ ಸಂಚುರೂಪಿಸಿ ಕೊಂದಿದ್ದಾಳೆ.
ಈ ನಡುವೆ ಅರ್ಚನಾ ತಾಯಿ ಕೂಡ ಇತ್ತೀಚೆಗೆ ನಿಧನರಾಗಿದ್ರು. ಅವರ ಅಷ್ಟು ಆಸ್ತಿಗೆ ಮುಂದಿನ ವಾರಸುದಾರರು ಅರ್ಚನಾ ಮತ್ತು ಯುವಿಕಾ ಮಾತ್ರ ಆಗಿದ್ದರು. ಹಾಗಾಗಿ ಅರ್ಚನಾ ನಂತರ ಆಸ್ತಿಗೆ ವಾರಸುದಾರರಳು ನಾನೇ ಎಂದು ಯುನಿಕಾ, ನವೀನ್ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಒಂದೂವರೆ ತಿಂಗಳುಗಳ ಕಾಲ ಅರ್ಚನಾ ಹತ್ಯೆಗೆ ಪ್ಲಾನ್ ನಡೆದಿತ್ತು. ಕೊಲೆ ಮಾಡಲು ಸ್ನೇಹಿತರಿಗೆ ನವೀನ್, ಕತೆಯೇ ಬೇರೆ ಹೇಳಿದ್ದ. ನಾನು ಅರ್ಚನಾಗೆ ಇಷ್ಟೆಲ್ಲಾ ಸಹಾಯ ಮಾಡಿದ್ದೆ. ಆದರೆ ನನ್ನನ್ನೇ ಮನೆಯಿಂದ ಹೊರ ಹಾಕಿದಳು ಅಂತ ಕಣ್ಣೀರಿನ ಕತೆ ಕಟ್ಟಿದ್ದ. ಆದರೆ ತನ್ನ ಸ್ನೇಹಿತರಿಗೆ ಯುವಿಕಾ ಜೊತೆಗಿದ್ದ ಅಕ್ರಮ ಸಂಬಂಧಧ ಬಗ್ಗೆ ನವೀನ್ ಹೇಳಿರಲಿಲ್ಲ.

7 ಮಂದಿ ಆರೋಪಿಗಳು ಬಂಧನ :
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ, ನವೀನ್ ಕುಮಾರ್ (ಅರ್ಚನಾ ಮೂರನೆ ಪತಿ), ಯುವಿಕಾ ರೆಡ್ಡಿ (ಅರ್ಚನಾ ರೆಡ್ಡಿ ಮಗಳು), ನವೀನ್‍ನ ಸ್ನೇಹಿತರಾದ ಸಂತೋಷ್, ಅನೂಪ್, ಆನಂದ್, ನರೇಂದ್ರ ಹಾಗೂ ದೀಪುವನ್ನು ಪೊಲೀಸರು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!