ರಾಜ್ಯದ 5 ನಗರಸಭೆ, 19 ಪುರಸಭೆ & 34 ಪಟ್ಟಣ ಪಂಚಾಯ್ತಿ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ,
ನಗರಸಭೆಯ 167 ಸ್ಥಾನಗಳಲ್ಲಿ ಬಿಜೆಪಿ 67, ಕಾಂಗ್ರೆಸ್ 61, ಜೆಡಿಎಸ್ 12, ಇತರೆ ಅಭ್ಯರ್ಥಿಗಳು 26 ವಾರ್ಡ್ಗಳಲ್ಲಿ ಗೆಲುವು ದಾಖಲಿಸಿದ್ದಾರೆ.
ಪುರಸಭೆಯ 436 ಸ್ಥಾನಗಳಲ್ಲಿ ಬಿಜೆಪಿ 173, ಕಾಂಗ್ರೆಸ್ 200, ಜೆಡಿಎಸ್ 21, ಇತರೆ 41 ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಪಟ್ಟಣ ಪಂಚಾಯತ್ನ 582 ಸ್ಥಾನಗಳಲ್ಲಿ ಬಿಜೆಪಿ 194, ಕಾಂಗ್ರೆಸ್ 238, ಜೆಡಿಎಸ್ 12, ಇತರೆ ಅಭ್ಯರ್ಥಿಗಳಿಗೆ 138 ಸ್ಥಾನಗಳಲ್ಲಿ ಗೆಲುವು ಸಿಕ್ಕಿದೆ.
434 ಸ್ಥಾನ ಗೆದ್ದ ಬಿಜೆಪಿ
ಈ ಮೂಲಕ ಒಟ್ಟು 1185 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 434 ಸ್ಥಾನವನ್ನು ಬಿಜೆಪಿ ಗೆದ್ದರೆ, 499 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಇನ್ನು ಜೆಡಿಎಸ್ ಕೇವಲ 45 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇತರೆ 205 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
11 ಜಿಲ್ಲೆಗಳ 34 ಪಟ್ಟಣ ಪಂಚಾಯತ್ಗಳಾದ ಚಿತ್ರದುರ್ಗ, ದಕ್ಷಿಣ ಕನ್ನಡ, ಬೆಳಗಾವಿ,
ಚಿಕ್ಕೋಡಿ, ಹಾವೇರಿ, ವಿಜಯಪುರ,ಬಾಗಲಕೋಟೆ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಪಟ್ಟಣ ಪಂಚಾಯತ್ಗೆ ಮತದಾನ ನಡೆದಿತ್ತು.
ಬೆಂಗಳೂರು ನಗರದ ಹೆಬ್ಬಗೋಡಿ, ಚಿಕ್ಕಮಗಳೂರು, ವಿಜಯನಗರದ ಹೊಸಪೇಟೆ ಮತ್ತು ತುಮಕೂರಿನ ಶಿರಾ ಹಾಗೂ ಗದಗ-ಬೆಟಗೇರಿ ನಗರಸಭೆಗೆ ಚುನಾವಣೆ ನಡೆದಿತ್ತು. 13 ಜಿಲ್ಲೆಗಳ 19 ಪುರಸಭೆಗಳಾದ ಧಾರವಾಡ, ಹಾವೇರಿ, ಬೆಂಗಳೂರು ನಗರ, ರಾಮನಗರ, ವಿಜಯನಗರ, ಬೆಳಗಾವಿ, ಉಡುಪಿ, ಕೊಪ್ಪಳ, ಬಳ್ಳಾರಿ, ರಾಯಚೂರು, ದಾವಣಗೆರೆ, ಚಿಕ್ಕೋಡಿ, ಯಾದಗಿರಿ ಪುರಸಭೆಗೆ ಚುನಾವಣೆ ನಡೆದಿತ್ತು.
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ