ಪತಿಯಿಂದ ದೂರವಾಗಿದ್ದ ಮಹಿಳೆ ಆಸ್ತಿ ವಿಚಾರಕ್ಕೆ ಪ್ರಿಯಕರನೊಂದಿಗೆ ಜಗಳ ಮಾಡಿಕೊಂಡು ಆತನಿಂದಲೇ ಕೊಲೆಯಾಗಿದ್ದಾಳೆ,
ಬೆಂಗಳೂರು ಹೊಸೂರು ಮುಖ್ಯರಸ್ತೆ ಹೊಸರೋಡ್ ಬಳಿ ನಡೆದ ಈ ಘಟನೆಯಲ್ಲಿ ಅರ್ಚನಾ ರೆಡ್ಡಿ ಕೊಲೆ ಮಾಡಿದ ಪ್ರಿಯಕರ ನವೀನ್ ಕುಮಾರ್ .
ಆನೇಕಲ್ ತಾಲೂಕಿನ ಜಿಗಣಿ ನಿವಾಸಿಯಾಗಿರುವ ಪ್ರಿಯಕರ ನವೀನ್ ಕುಮಾರ್ ಅರ್ಚನಾ ರೆಡ್ಡಿ 5 ವರ್ಷಗಳಿಂದ ಜೊತೆಯಾಗಿ ವಾಸವಾಗಿದ್ದರು.
ಇತ್ತೀಚೆಗೆ ಚನ್ನಪಟ್ಟಣ ಬಳಿಯ ಆಸ್ತಿಯೊಂದರ ಸಲುವಾಗಿ ಇಬ್ಬರ ನಡುವೆ ಜಗಳವಾಗಿದೆ. ಅಂದಿನಿಂದ ಅರ್ಚನಾ ರೆಡ್ಡಿ ಮೊದಲ ಪತಿಯ ಮಗನೊಂದಿಗೆ ಬೆಳ್ಳಂದೂರಿನಲ್ಲಿ ವಾಸವಿದ್ದಳು.
ನಿನ್ನೆ ಜಿಗಣಿ ಪುರಸಭೆಯ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಚನಾ ಜಿಗಣಿಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದಿದ್ದ ನವೀನ್ ಕುಮಾರ್, ತನ್ನ ಸಹಚರರೊಂದಿಗೆ ಹೊಸರೋಡ್ ಬಳಿ ಕಾದು ಕುಳಿತಿದ್ದರು.
ರಾತ್ರಿ ಅರ್ಚನಾ, ಮಗ ಹಾಗೂ ಮತ್ತಿಬ್ಬರು ಯುವಕರೊಂದಿಗೆ ಕಾರಿನಲ್ಲಿ ಬರುವ ವೇಳೆ ನವೀನ್ ಕುಮಾರ್ ಹಾಗೂ ಸಹಚರರು ಹಾಕಿ ಸ್ಟಿಕ್ ಹಾಗೂ ಲಾಂಗ್‌ನಿಂದ ದಾಳಿ ನಡೆಸಿದ್ದಾರೆ.
ಈ ವೇಳೆ ಕಾರು ಚಾಲಕ ಅರ್ಚನಾ ಮಗ ಇನ್ನುಳಿದವರು ಪರಾರಿಯಾಗಿದ್ದು, ನವೀನ್ ಕುಮಾರ್ ಹಾಗೂ ಸಹಚರರು ಅರ್ಚನಾಳನ್ನು ನದುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ನವೀನ್ ಹಾಗೂ ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ