ನಾಳೆಯಿಂದ ನೈಟ್​​ ಕರ್ಫ್ಯೂ: ಪಾಸ್ ಕೊಡಲ್ಲ, ನಿಯಮ ಉಲ್ಲಂಘಿಸಿದ್ರೆ NDMA ಕೇಸ್ -ಪಂತ್​ ಎಚ್ಚರಿಕೆ

Team Newsnap
1 Min Read

ನಾಳೆಯಿಂದ 10 ದಿನಗಳ ಕಾಲ ಸರ್ಕಾರದ ಆದೇಶದ ಪ್ರಕಾರ ರಾತ್ರಿ ಕರ್ಫ್ಯೂ ಜಾರಿಯಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5
ಗಂಟೆಯವರೆಗೆ ನೈಟ್​ ಕರ್ಫ್ಯೂ ಇರುತ್ತೆ‌. ಆದರೆ ಈ ಸಮಯದಲ್ಲಿ ಓಡಾಟ ನಡೆಸಲು ಯಾವುದೇ ಪಾಸ್ ನೀಡೋದಿಲ್ಲ.

ಇಂತಹ ಖಡಕ್ ಸಂದೇಶ ನೀಡಿದವರು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪಂತ್ ನೈಟ್ ಕರ್ಪ್ಯೂ ಸರ್ಕಾರದ ಆದೇಶದ ಪ್ರಕಾರ ಇರುತ್ತೆ. ಯಾರು ಹೊರಗಡೆ ಓಡಾಡೋಕೆ ಬಿಡಲ್ಲ. ಆದರೆ ಸರ್ಕಾರ ಆದೇಶದಲ್ಲಿ ವಿನಾಯಿತಿ ನೀಡಿರುವವರಿಗೆ ಓಡಾಟ ಮಾಡಲು ಅವಕಾಶವಿರುತ್ತೆ ಎಂದರು

ಬಸ್, ಕ್ಯಾಬ್ ಸೇವೆಯೂ ಇರುತ್ತೆ. ಆದರೆ ಎಲ್ಲಾ ಭಾಗದಲ್ಲೂ ನಾಕಾಬಂದಿ ಮಾಡಿ ಬಂದ್ ಮಾಡ್ತೀವಿ. ನಮ್ಮ ಪ್ಯಾಟ್ರೋಲಿಂಗ್ ಇರುತ್ತೆ. ನಿಯಮಗಳನ್ನು ಉಲ್ಲಂಘನೆ ಮಾಡುವವ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಕೇಸ್ ಮಾಡಲಾಗುವುದು ಎಂದು ಹೇಳಿದರು.

ಅಸ್ಪತ್ರೆ ಹೋಗುವವರು ದಾಖಲೆ ತೋರಿಸಿ ಹೋಗಬಹುದು. ಟಿಕೆಟ್ ತೋರಿಸಿ ಪ್ರಯಾಣಿಕರು ಟ್ರಾವೆಲ್ ಮಾಡಬಹುದು. ಯಾವುದೇ ಪಾಸ್ ಕೊಡಲ್ಲ ಎಂದು ಮಾಹಿತಿ ನೀಡಿದರು.

ಉಳಿದಂತೆ ಹೊಸ ವರ್ಷದ ದಿನವೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ತೀವಿ. ಇಂದಿರಾನಗರ, ಕೋರಮಂಗಲ, ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನ ಓಡಾಡೋಕೆ ಬಿಡಲ್ಲ. ಅಂದು ಪಬ್, ಬಾರ್ ರೆಸ್ಟೋರೆಂಟ್ ಹತ್ತು ಗಂಟೆಗೆ ಕ್ಲೋಸ್ ಮಾಡಬೇಕು. ಎಮರ್ಜೆನ್ಸಿ ಕೆಲಸ ಇರುವವರು ಬಿಟ್ಟರೇ ಬೇರೆ ಯಾರು ಹೊರ ಬರೋದಕ್ಕೆ ಬಿಡಲ್ಲ‌.

Share This Article
Leave a comment