December 19, 2024

Newsnap Kannada

The World at your finger tips!

puneeth rajkumar ashwini puneethrajkumar

ಪುನೀತ್​​​ ಪತ್ನಿ ಅಶ್ವಿನಿ 2.5 ಕೋಟಿ ರು ಅಡ್ವಾನ್ಸ್​ ಮರಳಿಸಿದ್ದು ಯಾರಿಗೆ?

Spread the love

ಪುನೀತ್​​ ರಾಜ್​​ಕುಮಾರ್​​ ತೆಗೆದುಕೊಂಡಿದ್ದ ಅಡ್ವಾನ್ಸ್​ ಹಣ ನಿರ್ಮಾಪಕರಿಗೆ ವಾಪಸ್ಸು ನೀಡಿರುವ ಅಶ್ವಿನಿ ಪುನೀತ್​​ ರಾಜ್​ಕುಮಾರ್​​ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಸಿನಿಮಾ ಇಂಡಸ್ಟ್ರಿಯಲ್ಲಿ ಸಂಭಾವನೆ ವಿಚಾರದಲ್ಲಿ ಜಗಳ, ವೈಮನಸ್ಸು ಸಹಜ. ಇಂತಹ ಹಲವು ಕೇಸ್​ಗಳು ಮುಂದಿರುವಾಗ ಈಗ ಪುನೀತ್​​ ರಾಜ್​​ಕುಮಾರ್​ ಪತ್ನಿ ಅಶ್ವಿನಿ ಅವರು, ತನ್ನ ಪತಿ ತೆಗೆದುಕೊಂಡ ಅಡ್ವಾನ್ಸ್​ ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ.

ಪುನೀತ್​ ನಿಧನರಾಗುವುದಕ್ಕೂ ಮೊದಲು ನಿರ್ಮಾಪಕ ಉಮಾಪತಿ ಅವರೊಂದಿಗೆ ಸಿನಿಮಾ ಮಾಡೋದಾಗಿ ಒಪ್ಪಿಕೊಂಡಿದ್ದರು.
ಅದಕ್ಕಾಗಿ 2.5 ಕೋಟಿ ರು ಅಡ್ವಾನ್ಸ್​ ಅನ್ನು ಪಡೆದಿದ್ದರು.

ಅಪ್ಪು ಅಗಲಿಕೆ ನೋವಲ್ಲೂ ನಿರ್ಮಾಪಕ ಉಮಾಪತಿಗೆ ಹಣ ವಾಪಸ್ ಕೊಟ್ಟು ಅಶ್ವಿನಿ ಮಾನವೀಯತೆ ಮರೆದಿದ್ದಾರೆ. ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣದಿಂದ ವಾಪಸ್ ನೀಡಿದ್ದೇನೆ ಎಂದು ಹೇಳಿದ್ದಾರೆ.

 ಜೂನ್- ಜುಲೈನಲ್ಲಿ ಉಮಾಪತಿ ಬ್ಯಾನರ್ ನಲ್ಲಿ ಅಪ್ಪು ಅವರ ಸಿನಿಮಾ ಸೆಟ್ಟೇರಬೇಕಿತ್ತು. ಈ ಚಿತ್ರವನ್ನು ನಿರ್ದೇಶಕ ತರಣ್ ಸುಧೀರ್ ನಿರ್ದೇಶನ ಮಾಡಬೇಕಿತ್ತು. 

ತರುಣ್ ಸುದೀರ್ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ಕಥೆ ಹೇಳಿ ಫೈನಲ್ ಕೂಡ ಮಾಡಿದ್ದರು. ಆದರೆ ಈ ನಡುವೆ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಪ್ರಾಜೆಕ್ಟ್‌ ಕ್ಯಾನ್ಸಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಉಮಾಪತಿ ಶ್ರೀನಿವಾಸ್ ಅವರಿಗೆ ಮುಂಗಡ ಹಣವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ವಾಪಸ್​ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!