December 23, 2024

Newsnap Kannada

The World at your finger tips!

7412cb38 e54f 468c 8df5 2ced9713a886

ತಡೆಗೋಡೆ ಇಲ್ಲದ ಕೆರೆಗೆ ಉರುಳಿದ ಕಾರು – ತುಮಕೂರು ವ್ಯಕ್ತಿ ಸಾವು

Spread the love

ದೊಡ್ಡಕೆರೆಗೆ ತಡೆ ಗೋಡೆ ಇಲ್ಲದ ಕಾರಣ ಕಾರು ಉರುಳಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಜರುಗಿದೆ

ಚಿತ್ರದುರ್ಗ ತಾಲೂಕಿನ ಕೋಡಿರಂಗ ವನಹಳ್ಳಿಯಿಂದ ಭರಮಸಾಗರದ ಕಡೆಗೆ ಗುರುವಾರ ತಡರಾತ್ರಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ

ಕಾರಿನಲ್ಲಿದ್ದ ತುಮಕೂರು ನಿವಾಸಿ ಜಿ. ರಮೇಶ್ (40) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

25 ವರ್ಷಗಳ ಬಳಿಕ ತುಂಬಿದ್ದ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ದೊಡ್ಡಕೆರೆ ಏರಿ ಮೇಲೆ ಬರುತ್ತಿದ್ದ ಕಾರು ಕೆರೆಗೆ ಪಲ್ಟಿಯಾಗಿ ದುರ್ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಕೆರೆಯಲ್ಲಿ ನೀರಿನೊಳಗೆ ಕಾರಿನ ಹೆಡ್ ಲೈಟ್ ಉರಿಯುತ್ತಿದ್ದ ಬೆಳಕನ್ನು ನೋಡಿದ ಸಾರ್ವಜನಿಕರು ಅಚ್ಚರಿಯಾಗಿ ಹಗ್ಗ ಹಾಗೂ ಜೆಸಿಬಿ ಸಹಾಯದಿಂದ ಕಾರನ್ನು ಹೊರ ತೆಗೆದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!