ದೇಶದಲ್ಲೆ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು (ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮವು) ಸಮೃದ್ದಿ ಯೋಜನೆ ಚಾಲನೆ ನೀಡಿದೆ.
೨೦೧೮ರಲ್ಲಿ ಈ ವಿನೂತನ ರೀತಿಯ ಪ್ಲಗ್ ಅಂಡ್ ಪ್ಲೇ ಮಾಡಲ್ ಮಾದರಿಯ ಮೂಲಕ ಉದ್ಯಮಶೀಲತೆ ಅಭಿವೃದ್ದಿಯನ್ನು ಉತ್ತೇಜಿಸಲು ಸಮೃದ್ದಿ ಯೋಜನೆಯನ್ನು ಆರಂಭಿಸಲಾಗಿದೆ.
ಮುಖ್ಯವಾಗಿ ಪರಿಶಿಷ್ಠ ಜಾತಿ ನಿರುದೋಗಿ ಯುವಕ – ಯುವತಿಯರಿಗೆ ವಿವಿಧ ಸ್ವಯಂ
ಉದ್ಯೋಗ ಘಟಕಗಳನ್ನು ಆರಂಭಿಸಲು ಹಾಗೂ ಲಾಭದಾಯಕವಾಗಿ ನಡೆಸಲು ಅಗತ್ಯವಾದ ಉದ್ಯಮಶೀಲತಾ ತರಬೇತಿ /ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಘಟಕಗಳನ್ನು ಸೃಷ್ಟಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಈ ಯೋಜನೆಯ ಮುಖ್ಯ ಭಾಗವಾಗಿ ರಾಜ್ಯದ್ಯಂತ ವಿವಿಧ ೨ ಟೈರ್ ಮತ್ತು ೩ ಟೈರ್ ಜಿಲ್ಲೆಗಳಿಂದ ಆಯ್ಕೆಯಾದ ಫಲಾನುಭವಿಗಳು ಮತ್ತು ಫ್ರಾಂಚೈಸರ್‌ಗಳಿಂದ ಸಕಾರತ್ಮಕ ಪ್ರತಿಕ್ರಿಯೆ ಸಿಕ್ಕಿದೆ.
೪೦ ಕ್ಕೂ ಅಧಿಕ ಫ್ರಾಂಚೈಸರ್‌ಗಳೊಂದಿಗೆ ಇಲಾಖೆಯು ಸುಮಾರು ೯೦೦ ಮಳಿಗೆಗಳನ್ನು ಕಾರ್ಯಗತಗೊಳಿಸಿದೆ.
ಸುಮಾರು ೩೫೦ ಮಳಿಗೆಗಳು ಪೈಪ್‌ಲೈನ್‌ನಲ್ಲಿವೆ., ರಾಜ್ಯದ್ಯಂತ ೧೨೫೦ ಮಳಿಗೆಗಳನ್ನು ಸ್ಥಾಪಿಸುವಲ್ಲಿ ಹೊಸ ಬೆಂಬಲವನ್ನು ತಲುಪಲಾಗಿದೆ.
ಈಗಾಗಲೇ ಈ ಯೋಜನೆಯ ಮೂಲಕ ಸಾವಿರಾರು ಯುವಕರು ಪ್ರಯೋಜನ ಪಡೆದಿದ್ದಾರೆ.
ಮುಖ್ಯವಾಗಿ ನಂದಿನಿ, ಪಾರಾಗಾನ್, ಪ್ರೆಸ್ಟಿಜ್ ಶೋ ರೂಂ. ಹಂಪ್ಟಿ ಡಂಪ್ಟಿ ಮಕ್ಕಳ ಬಟ್ಟೆ ಮಳಿಗೆ, ಚೆರಿ ಏಜನ್ಸಿ, ಸ್ಪಿಡ್ ಪೋರ್ಸ್ ೨ ವೀಲರ್ ಮತ್ತು ಸಲಕರಣೆಗಳ ಮಳಿಗೆ, ಎಲೆಕ್ಟ್ರಾನಿಕ್ ಶೋ ರೂಂ
ಸಮೃದ್ದಿ ಯೋಜನೆ ಫಲಾನುಭವಿಗಳು ಏನು ಹೇಳುತ್ತಾರೆ?
ಇಂದು ಓದಿದ ಎಲ್ಲರಿಗೂ ಕೆಲಸ ಸಿಗುವುದು ಕಷ್ಟವಿರುವ ಈಗಿನ ಕಾಲದಲ್ಲಿ ಈ ಯೋಜನೆಯು ಯುವಕರ ಬಾಳಲ್ಲಿ ಆಶಾಕಿರಣವಾಗಿದೆ
ಸಿದ್ದಾರ್ಥ ಎಂಬ ಯುವಕ ಓದಿದ್ದು ಬಿಎಸ್‌ಸಿ ಮತ್ತು ಎಂಎಡ್ ಪದವೀಧರರು. ಎಷ್ಟೊ ಕಡೆ ಸಂದರ್ಶನ ಕೊಟ್ಟರು ಒಂದಿಲ್ಲ ಒಂದು ಕಾರಣದಿಂದ ಅವರಿಗೆ ಕೆಲಸ ಆಗಲಿಲ್ಲ
,ಮನೆಯಲ್ಲಿ ಬಡತನ ಆಗ ೨೦೧೮ ರಲ್ಲಿ ಸ್ನೇಹಿತರ ಒತ್ತಾಯದ ಮೇರೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿದ್ದು ಅಷ್ಟೆ ಮುಂದೆ ನಡೆದಿದ್ದು ಎಲ್ಲವೂ ವಿಸ್ಮಯ ಎಂದು ಹೇಳುತ್ತಾರೆ.
ಸಾವಿರಾರು ಅರ್ಜಿದಾರರಲ್ಲಿ ಇವರದ್ದು ಆಯ್ಕೆ ಆಗುವ ಮೂಲಕ ಇವರಿಗೆ ಬಾಲ್ಯದಿಂದ ಇಷ್ಟವಿದ್ದ ಸ್ವಂತ ಉದ್ದಿಮೆ ನಡೆಸುವ ಕನಸು ಸಹಕಾರವಾಯಿತು. ಇವರನ್ನು ಚೆರಿ ಏಜೆನ್ಸಿ ಆಯ್ಕೆ ಮಾಡಿ ತರಬೇತಿ ನೀಡಿ ಈಗ ತಮ್ಮದೆ ರೀಟೆಲ್ ಶೋರೂಂ ಶುರುಮಾಡಿದ್ದಾರೆ ಮುಖ್ಯವಾಗಿ ಇವರ ಶೋರೂಂನಲ್ಲಿ ಟೈರ್, ವೀಲ್ ಬಾಲೆನ್ಸಿಂಗ್ ಮಾಡುವ ಮೂಲಕ ಆದಾಯ ಪಡೆಯುತ್ತಿದ್ದಾರೆ.
ಇದರ ಜೊತೆಗೆ ತಮ್ಮದೆ ಸ್ವಂತ ನಂದಿನಿ ಪಾರ್ಲರ್ ಹೊಂದಿರುವ ಸತೀಶ್ ಹೇಳುವ ಪ್ರಕಾರ ಪ್ರತಿಯೊಬ್ಬರು ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದು ಕಷ್ಟ ನಾವೆಲ್ಲರೂ ನಮ್ಮದೆ ಆದ ಸ್ವಂತ ಉದ್ದಿಮೆಯನ್ನು ಮಾಡಿಕೊಳ್ಳಬೇಕು. ನನಗೆ ಅತಿ ಹೆಚ್ಚು ಖುಷಿ ತಂದಿರುವ ವಿಷಯ ಏನಂದರೆ ನಾನು ಯಾರು ಅಧಿಕಾರಿಗಳ ಕೈಯಲ್ಲಿ ಇಲ್ಲ ಕಷ್ಟ ಪಟ್ಟಷ್ಟು ಲಾಭ ಪಡೆಯಬಹದು,
ಹಂಪ್ಟಿ ಡಂಪ್ಟಿ ಮಕ್ಕಳ ಬಟ್ಟೆ ಮಳಿಗೆ ನಡೆಸುತ್ತಿರುವ ಸತೀಶ್ ಅವರ ಪ್ರಕಾರ ಬಾಲ್ಯದಿಂದಲೂ ನನಗೆ ಮಕ್ಕಳೆಂದರೆ ಬಹಳ ಇಷ್ಟವಿತ್ತು ಆರ್ಧಿಕ ಸಂಕಷ್ಟದಿಂದ. ನಾನು ಸ್ವಂತ ಉದ್ದಿಮೆ ಅನ್ನುವುದು ಕನಸಾಗಿತ್ತು ಆದರೆ ಈಗ ನನ್ನ ಸ್ವಂತ ಮಕ್ಕಳ ಬಟ್ಟೆ ಮಳಿಗೆ ನೋಡಿದರೆ ಖುಷಿಯಾಗುತ್ತದೆ ಅಂದರು.
ಹೆಚ್ಚಿನ ಯುವಕ ಯುವತಿಯರು ಕೇವಲ ಓದಿನಲ್ಲಿ ಚುರುಕಿದ್ದು, ಸ್ವಂತ ಉದ್ದಿಮೆ ನಡೆಸುವ ಬಗ್ಗೆ ಅಷ್ಟು ಗಮನಹರಿಸದಿರುವ ಈ ಕಾಲದಲ್ಲಿ ಈ ಯೋಜನೆಯ ಮೂಲಕ ಸರ್ಕಾರದ ಈ ಸವಲತ್ತು ಪಡೆದು ಮಾದರಿ ಜೀವನ ನಡೆಸುತ್ತಿರುವುದು ಸಂತಸದ ವಿಷಯವೇ ಸರಿ.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
More Stories
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು