ಮಹಿಳೆಯೊಬ್ಬರನ್ನು ಆಟೋ ಚಾಲಕ ಅಪಹರಿಸಲು ಯತ್ನಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಟ್ವಿಟ್ಟರ್‌ಲ್ಲಿ ಪೋಸ್ಟ್ ಮಾಡಿದ ಮಹಿಳೆ ತಮಗಾದ ತೊಂದರೆಯನ್ನು ಹಂಚಿಕೊಂಡಿದ್ದಾರೆ.
ಮಹಿಳೆಯ ಮನೆಯಿಂದ ಗುರ್ಗಾಂವ್‌ಗೆ ತಲುಪಲು ಕೇವಲ 7 ನಿಮಿಷವಾಗುತ್ತದೆ. ಅಲ್ಲಿಂದ ಆಟೋದಲ್ಲಿ ಹೋಗುವಾಗ ಚಾಲಕರೊಬ್ಬರು ತಮ್ಮನ್ನು ಅಪಹರಿಸಲು ಪ್ರಯತ್ನಿಸಿದರು. ಇದರಿಂದಾಗಿ ನನಗೆ ಆಟೋದಿಂದ ಜಿಗಿಯಬೇಕಾದ ಸ್ಥಿತಿ ಉಂಟಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಮಹಿಳೆ ಹೇಳಿರುವುದು ಏನು ?
ನಿನ್ನೆ ನನ್ನ ಜೀವನದ ಅತ್ಯಂತ ಭಯಾನಕ ದಿನಗಳಲ್ಲಿ ಒಂದಾಗಿತ್ತು. ನಾನು ಕಿಡ್ನಾಪ್ ಆಗುತ್ತೇನೆ ಎಂದೇ ಭಾವಿಸಿದ್ದೆ. ಅದನ್ನು ನೆನಪಿಸಿಕೊಂಡರೆ ಇನ್ನು ನನಗೆ ಭಯವಾಗುತ್ತದೆ. ಮಧ್ಯಾಹ್ನ ಆಟೋಸ್ಟ್ಯಾಂಡ್ ನಿಂದ ಗುರ್ಗಾಂವ್‌ಗೆ ಹೋಗಲು ಆಟೋವನ್ನು ಹತ್ತಿದ್ದೆ. ಮನೆಯಿಂದ ನಗರಕ್ಕೆ ಕೇವಲ 7 ನಿಮಿಷದ ದಾರಿಯಾಗಿತ್ತು.
ನಾನು ಆಟೋ ಚಾಲಕನಲ್ಲಿ ಹಣವಿಲ್ಲ, ಪೇಟಿಎಂ ಮಾಡುತ್ತೇನೆ ಎಂದು ಮನವಿ ಮಾಡಿದ್ದೆ. ಅದಕ್ಕೆ ಅವನು ಒಪ್ಪಿಗೆ ಸೂಚಿಸಿದ್ದ.
ಅವನನ್ನು ನೋಡಿದರೆ ಉಬರ್ ಆಟೋಚಾಲಕನಂತೆ ಕಾಣುತ್ತಿದ್ದ. ನಾನು ಆಟೋದಲ್ಲಿ ಕುಳಿತಿದ್ದೆ. ಆಟೋ ಪ್ರಾರಂಭಿಸಿದ ಆತ ಆಟೋವನ್ನು ಅಪರಿಚಿತ ರಸ್ತೆಗೆ ತಿರುಗಿಸಿದ. ಅದನ್ನು ಗಮನಿಸಿದ ನಾನು ಎಡಗಡೆ ರೋಡ್‌ನಲ್ಲಿ ಯಾಕೆ ಹೋಗುತ್ತಿದ್ದೀರಿ, ನಾನು ಹೋಗುವ ರಸ್ತೆ ಬಲಕ್ಕೆ ಇದೆ ಎಂದು ಕಿರುಚಿದೆ. ಅದಕ್ಕೆ ಆತ ಏನು ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ನಾನು ಬೇರೆ ದಾರಿ ಕಾಣದೇ 30 ರಿಂದ 40 ಕಿ.ಮೀ ವೇಗದಲ್ಲಿದ್ದ ಆಟೋದಿಂದ ಜಿಗಿದೆ ಎಂದು ತಿಳಿಸಿದ್ದಾರೆ.
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
More Stories
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ