February 23, 2026

Newsnap Kannada

The World at your finger tips!

mandya , news , politics

ಕರ್ನಾಟಕ ಬಂದ್ ಕೈ ಬಿಡಿ – ಸಚಿವ ಅಶೋಕ್ ಮನವಿ

Spread the love

ಎಂಇಎಸ್ ಪುಂಡಾಟ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ನೀಡಲಾಗಿರುವ ಡಿ.31 ರಂದು ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ ಎಂದು ಕಂದಾಯ ಇಲಾಖೆ ಸಚಿವ ಆರ್​.ಅಶೋಕ್​ ಮನವಿ ಮಾಡಿದ್ದಾರೆ.

ಬೆಂಗಾವಿಯ ಸುವರ್ಣಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಕೊರೊನಾ ಸಮಯದಲ್ಲಿ ಜನರಿಗೆ ಬಂದ್ ಬಿಸಿ ತಟ್ಟಿದೆ. ಈಗ ಮತ್ತೆ ಬಂದ್ ನಿಂದಾಗಿ ಜನ ಸಮಸ್ಯೆ ಅನುಭವಿಸಬೇಕಾಗುತ್ತೆ ಎಂದರು.

ಎಂಇಎಸ್ ಒಂದು ಪಕ್ಷ ಆಗಿರೋದರಿಂದ ಅದನ್ನು ಕಾನೂನು ರೀತಿಯಲ್ಲಿ ಬ್ಯಾನ್ ಮಾಡಬೇಕು. ಆ ಬಗ್ಗೆ ಈಗಾಗಲೇ ಚರ್ಚೆ ಸಹ ನಡೆದಿದೆ. ಬಂದ್ ಮಾಡುವವರಿಗೆ ನನ್ನದೊಂದು ಮನವಿ. ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ ಎಂದರು.

error: Content is protected !!