February 23, 2026

Newsnap Kannada

The World at your finger tips!

shivasene 1 1

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮತ್ತೆ ಕನ್ನಡ ಬಾವುಟಕ್ಕೆ ಬೆಂಕಿ ಹಾಕಿದ ಶಿವಸೇನೆ ಪುಂಡರು

Spread the love

ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟು ಶಿವಸೇನೆ ಪುಂಡರು ವಿಕೃತಿ ಮೆರೆದಿದ್ದಾರೆ.

ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕನ್ನಡ ಧ್ವಜಕ್ಕೆ ಬೆಂಕಿ ಹಾಕಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ್‌ನ ಮಹಾರಾಣಾ ಪ್ರತಾಪ್ ಚೌಕ್‌‌ನಲ್ಲಿ ಪುಂಡಾಟಾ ಮಾಡಿದ್ದಾರೆ

ಕರ್ನಾಟಕ ಮಹಾರಾಷ್ಟ್ರ ಗಡಿಗೆ ನುಗ್ಗಿ‌ ಪ್ರತಿಭಟನೆ ನಡೆಸ್ತೇವೆ‌ ಎಂದು ಶಿವಸೇನೆ ಪ್ರಮುಖ ಚಂದ್ರಕಾಂತ ಮೈನಗುರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಇಂದು ಕಾಗವಾಡ ಗಡಿಗೆ ಬಂದು ಪ್ರತಿಭಟನೆ ನಡೆಸ್ತೀವಿ ಎಂದು ಶಿವಸೇನೆ ಪುಂಡರು ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

error: Content is protected !!