February 22, 2026

Newsnap Kannada

The World at your finger tips!

rayanna

ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಧ್ವಂಸ; 27 ಜನ ಪುಂಡರ ಬಂಧನ

Spread the love

ಬೆಳಗಾವಿಯಲ್ಲಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಎಂಇಎಸ್ ಪುಂಡರು ಧ್ವಂಸಗೊಳಿಸಿದ ಬೆನ್ನಲ್ಲೇ 27 ಜನ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ

ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಡಿಸಿಪಿ ವಿಕ್ರಂ ಆಮ್ಟೆ, 4 ಪೋಲಿಸ್ ಠಾಣೆಯಲ್ಲಿ ಎಫ್​ಐಆರ್ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಇಂದು ಬೆಳಗ್ಗಿನಿಂದಲೇ ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಇಲ್ಲಿಯವರೆಗೂ 27 ಜನ ಆರೋಪಿಗಳನ್ನು ಬಂಧಿಸಿರುವುದಾಗಿ ಅವರು ಹೇಳಿದ್ದಾರೆ. ಜೊತೆಗೆ  ನಗರದಲ್ಲಿ ಇವತ್ತು ಮತ್ತು ನಾಳೆ ಯಾವುದೇ ಪ್ರತಿಭಟನೆಗೆ ಆವಕಾಶ ನೀಡಲಾಗುವುದಿಲ್ಲ, ಜನರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಅವರು ಮನವಿ ಕೂಡ ಮಾಡಿದ್ದಾರೆ.

error: Content is protected !!