February 21, 2026

Newsnap Kannada

The World at your finger tips!

roja

ನಟಿ ರೋಜಾ ಸೇರಿದಂತೆ 75 ಪ್ರಯಾಣಿಕರಿದ್ದ ವಿಮಾನ ಬೆಂಗಳೂರಿನಲ್ಲಿ ತುತು೯ ಭೂಸ್ಪಶ೯

Spread the love

ನಟಿ ಮತ್ತು ಆಂಧ್ರ ಶಾಸಕಿ ರೋಜಾ ಸೇರಿದಂತೆ 75 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪಶ೯ ಮಾಡಿದೆ.

ರೋಜಾ, ಟಿಡಿಪಿ ಶಾಸಕ ವೇಗುಳ್ಳ ಜೋಗೇಶ್ವರ ರಾವ್, ಮಾಜಿ ಸಚಿವ ಎನಮ ರಾಮಕೃಷ್ಣಡು ಸೇರಿದಂತೆ 75 ಪ್ರಯಾಣಿಕರು ಇದ್ದ ವಿಮಾನ ರಾಜಮಂಡ್ರಿಯಿಂದ ಹೊರಟು ತಿರುಪತಿಗೆ ತಲುಪಬೇಕಿತ್ತು.

ತಾಂತ್ರಿಕ ದೋಷದ ಕಾರಣದಿಂದ ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.

4 ಗಂಟೆಗಳ ಕಾಲ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಕಾಯಿಸಲಾಗಿದೆ.

ಈ ಕುರಿತಂತೆಸೂಕ್ತ ಮಾಹಿತಿ ಕೂಡ ನೀಡಿಲ್ಲ ಇದರಿಂದ ಗೊಂದಲ ಉಂಟಾಗಿದೆ. ಕೆಲವು ಪ್ರಯಾಣಿಕರು ರಸ್ತೆ ಮಾರ್ಗವಾಗಿ ತಿರುಪತಿಗೆ ತೆರಳಿದ್ದಾರೆ. ವಿಮಾನ ಕಂಪನಿ ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ರೋಜಾ ಆಕ್ರೋಷ ವ್ಯಕ್ತಪಡಿಸಿದ್ದಾರೆ.

error: Content is protected !!