February 19, 2026

Newsnap Kannada

The World at your finger tips!

thande maga

ಬೆಂಗಳೂರಿನಲ್ಲಿ ದುರಂತ: ಮಾನಸಿಕ ಅಸ್ವಸ್ಥ ಮಗನನ್ನು ಕೊಂದು, ತಂದೆ ಆತ್ಮಹತ್ಯೆ

Spread the love

ಮಾನಸಿಕ ಅಸ್ವಸ್ಥನಾಗಿದ್ದ ಮಗನನ್ನು ಕೊಲೆ ಮಾಡಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಎಸ್ ಆರ್ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

10 ವರ್ಷದ ಉದಯ್ ಸಾಯಿ ಎಂಬ ಮಗನನ್ನು ಮುಂಜಾನೆ 6 ಗಂಟೆಗೆ ಮನೆ ನೀರಿನ ಸಂಪ್ ನಲ್ಲಿ ಎಸೆದು ಸುರೇಶ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುರೇಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸುರೇಶ್ ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು.

ಇತ್ತ ಮಗ ಉದಯ್ ಮಾನಸಿಕ ಅಸ್ವಸ್ಥನಾಗಿದ್ದರಿಂದ ಮಗನನ್ನು ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಯ ಬಳಿ ಜಗಳವಾಡುತ್ತಿದ್ದ. ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆ ಇದೇ ನಾನು ಏನಾದ್ರು ಆದರೆ ನನ್ನ ಮಗನಿಗೆ ಯಾರು ನೋಡಿಕೊಳ್ತಾರೆ ಎನ್ನುವುದು ಮನಸ್ಸಿನಲ್ಲಿ ಇಟ್ಟುಕೊಂಡು ಸುರೇಶ್ ಮಗನನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ತನಿಖೆ ನಡೆಸಲಾಗುತ್ತಿದೆ.

error: Content is protected !!