February 21, 2026

Newsnap Kannada

The World at your finger tips!

sucide

ಮಾಗಡಿಯಲ್ಲಿ ವಿವಾಹಿತ ಪ್ರೇಮಿಗಳು ಆತ್ಮಹತ್ಯೆ

Spread the love

ವಿವಾಹಿತ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಗ್ರಾಮ ದಾಸೇಗೌಡನಪಾಳ್ಯದಲ್ಲಿ ನಡೆದಿದೆ.

ಶ್ರೀನಿವಾಸ್(35), ಪುಷ್ಪಲತಾ(32) ಮೃತ ದುರ್ದೈವಿಗಳು.

ಮೃತರಿಬ್ಬರಿಗೂ ಬೇರೆ ಬೇರೆ ಮದುವೆಯಾಗಿತ್ತು. ಆ ಬಳಿಕ ಕೆಲ ಸಮಯ ದೂರವಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರು ಸಹ ಒಟ್ಟಿಗೆ ವಾಸ ಮಾಡಲು ಆರಂಭಿಸಿದ್ದರು ಎನ್ನಲಾಗಿದೆ.

ನಿನ್ನೆ ಇಬ್ಬರ ನಡುವೆ ಮಾತುಕತೆ ನಡೆದಿದೆ ಈ ವೇಳೆ ಸಮಾಧಾನಗೊಂಡಿದ್ದ ಪುಷ್ಪಲತಾ ಮೊದಲು ನೇಣಿಗೆ ಶರಣಾಗಿದ್ದಳಂತೆ.

ಆ ಬಳಿಕ ಆಕೆಯ ಮೃತದೇಹವನ್ನು ಕಂಡ ಶ್ರೀನಿವಾಸ್ ಆಕೆಯ ಮೃತದೇಹ ಕೆಳಗೆ ಇಳಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಕುದೂರು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

error: Content is protected !!