December 19, 2024

Newsnap Kannada

The World at your finger tips!

election , JDS , Politics

Political retirement if HDK does not become CM - CM Ibrahim ಹೆಚ್​.ಡಿ.ಕೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ - ಸಿ.ಎಂ.ಇಬ್ರಾಹಿಂ

ಎಷ್ಟೋ ಮುಸ್ಲಿಮರು ಲಿಂಗಾಯತರಾದರು ಆಗ ನಾವೇನಾದರೂ ಮಾತನಾಡಿದ್ವಾ?

Spread the love

ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು ಆಗ ನಾವೇನಾದರೂ ಮಾತನಾಡಿದ್ವಾ ಎಂದು ಪ್ರಶ್ನಿಸುವ ಮೂಲಕ ಮತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ  ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ಬರುವ ಅಧಿವೇಶನದಲ್ಲಿ
ಮತಾಂತರ ನಿಷೇಧ ತಡೆ ಬಿಲ್ ಬರುತ್ತಿದೆ. ಬಲವಂತವಾಗಿ ಮತಾಂತರ ಮಾಡಬಾರದು ಅಂತ ಸಂವಿಧಾನದಲ್ಲೇ ಇದೆ. ಹಾಗಿದ್ದರೂ ಈ ಮಸೂದೆಯನ್ನು ಯಾಕೆ ತರುತ್ತಿದ್ದಾರೆ? ಇದರರ್ಥ ಸರ್ಕಾರ ಎಲ್ಲದರಲ್ಲೂ ವಿಫಲವಾಗುತ್ತಿದೆ. ಜನರ ಗಮನ ಬೇರೆ ಕಡೆ ಸೆಳೆಯಲು ಬೊಮ್ಮಾಯಿ ಮೂಲಕ ಮಸೂದೆ ಮಂಡನೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.  

ಮತಾಂತರವನ್ನು ಯಾರೂ ಬಲವಂತವಾಗಿ ಮಾಡಬಾರದು. ಸ್ವಯಿಚ್ಚೆಯಿಂದ ಬೇಕಾದರೆ ಮತಾಂತರವಾಗಲಿ. ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು. ಆಗ ನಾವೇನಾದರೂ ಮಾತಾಡಿದೆವಾ? ರಿಜ್ವಿ ಹಿಂದೂ ಆದ, ನಾವು ಏನಾದರೂ ಹೇಳಿದ್ವಾ? ಮತಾಂತರ ಅವರವರ ಇಚ್ಛೆ. ಅದಕ್ಕಾಗಿ ಒಂದು ಮಸೂದೆ ತರುವ ನಾಟಕ ಎಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!