ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಹ್ಯಾಕರ್ಸ್ ಶಾಕ್ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯನ್ನು ಭಾನುವಾರ ಮುಂಜಾನೆ 2 ಗಂಟೆ ಸಮಯದಲ್ಲಿ ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ.
ಈ ವಿಚಾರವನ್ನುಪಿಎಂಒ ತನ್ನ ಟ್ವಿಟರ್ ಖಾತೆಯಲ್ಲಿ 3 ಗಂಟೆ ವೇಳೆಗೆ ಟ್ವೀಟ್ ಮಾಡಿ ಖಚಿತ ಪಡಿಸಿದೆ.
ಹ್ಯಾಕ್ ಆಗಿರುವ ವಿಚಾರವನ್ನು ಟ್ವಿಟರ್ಗೆ ಮಾಹಿತಿ ನೀಡಲಾಗಿದೆ, ಸದ್ಯ ಪ್ರಧಾನಿಗಳ ಖಾತೆಯನ್ನು ಭದ್ರಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಮೋದಿ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರೋ ಹ್ಯಾಕರ್, ಕ್ರಿಪ್ಟೋ ಕರೆನ್ಸಿ ಕುರಿತು ಟ್ವೀಟ್ ಮಾಡಿದ್ದರು. ಬಿಟ್ ಕಾಯಿನ್ಅನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ. ಬಿಟ್ ಕಾಯಿನ್ ಟೆಂಡರ್ಗಳನ್ನು ಸರ್ಕಾರ ಕರೆದಿದೆ. ಸರ್ಕಾರ 500 ಬಿಟಿಸಿಗಳನ್ನು ಖರೀದಿ ಮಾಡಿದೆ. ದೇಶದ ಜನರಿಗೆ ಸರ್ಕಾರ ಹಂಚಿಕೆ ಮಾಡಲಿದೆ ಎಂದು ಹ್ಯಾಕರ್ಗಳು ಪೋಸ್ಟ್ ಮಾಡಿದ್ದರು.
ಸದ್ಯ ಈ ಪೋಸ್ಟ್ಅನ್ನು ಡಿಲೀಟ್ ಮಾಡಲಾಗಿದೆ. ಟ್ವಿಟರ್ ಖಾತೆ ಹ್ಯಾಕ್ ಆದ ಸಂದರ್ಭದಲ್ಲಿ ಪೋಸ್ಟ್ ಮಾಡಲಾಗಿರುವ ಸಂದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಡಿ ಎಂದು ಪಿಎಂಒ ಖಾತೆ ತಿಳಿಸಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ