ನಾವು ಸೀರೆ, ಕಾಯಿನ್ಗೆ ಬಗ್ಗಲ್ಲ. ನಮಗೆ ಪಕ್ಷ ಮುಖ್ಯ, ನಾವು ಬಿಜೆಪಿಗೆ ಮತ ಹಾಕಿಲ್ಲ. ನಾವು ಕಾಂಗ್ರೆಸ್ನವರು ಎಂದು ನೀಡಿದ್ದ 11 ಸೀರೆ 11 ಬೆಳ್ಳಿ ಕಾಯಿನ್ಗಳನ್ನು ವಾಪಸ್ ನೀಡಿದ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ವಿಧಾನ ಪರಿಷತ್ ಚುನಾವಣೆ ಸಲುವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ಸದಸ್ಯರ ಮತದಾಸೆಯ ಸಲುವಾಗಿ ಬಿಜೆಪಿ ಮುಖಂಡರು ಸೀರೆ ಹಾಗೂ ಬೆಳ್ಳಿ ನಾಣ್ಯಗಳನ್ನು ಹಂಚಿದ್ದರು ಎನ್ನಲಾಗಿದೆ.
ಆದರೆ, ಚುನಾವಣೆ ಮುಗಿದ ಬಳಿಕ ಬಿಜೆಪಿ ಮುಖಂಡರು ನೀಡಿದ್ದ 11 ಸೀರೆ, 11 ಬೆಳ್ಳಿ ಕಾಯಿನ್ಗಳನ್ನು ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯರು ವಾಪಸ್ ನೀಡಿದ್ದಾರೆ.
ಈ ಕುರಿತ ವಿಡಿಯೋ ಗ್ರಾಮದಲ್ಲಿ ವೈರಲ್ ಆಗಿದೆ.
ಬಳ್ಳಾರಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಪ್ರತಿ ಪಕ್ಷಗಳು ಮತದಾರರ ಮನವೊಲಿಸಲು ಮತದಾರರಿಗೆ ಅನೇಕ ಆಮಿಷವೊಡ್ಡಿದ್ದರು
ಆದರೆ ಬಳ್ಳಾರಿಯಲ್ಲಿ ಬಿಜೆಪಿ ಮುಖಂಡರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ದವಾಗಿ ಮತ ಹಾಕಿ ಪಕ್ಷ ನಿಷ್ಠೆ ತೋರಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು