ಆಕೆಯ ಗಂಡ ಭಾರಿ ಅನುಮಾನದ ಪ್ರಾಣಿ . ಆತನ ಕಿರುಕುಳಕ್ಕೆ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಡಿದ್ದಾಳೆ ಎಂದು
ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ತಾಯಿ ಹೇಳಿದ ಮಾತುಗಳಿವು.
26 ವಷ೯ ಟೆಕ್ಕಿ ಸಂಗೀತಾ ಇಂದು ಆತ್ಮಹತ್ಯೆಗೆ ಬೇರೆ ಕೋನಗಳಿಂದ ತನಿಖೆ ನಡೆಯುವ ಮುನ್ನವೇ ಮೃತಳ ತಾಯಿ ಹೇಳುವ ಪ್ರಕಾರ ಗಂಡನ ಅನುಮಾನವೇ ತನ್ನ ಮಗಳ ಸಾವಿಗೆ ಕಾರಣ ಎನ್ನಲಾಗಿದೆ.
ಬದುಕಿದ್ದಾಗ ಸಂಗೀತಾ ತನ್ನ ತಾಯಿಗೆ ಹೇಳಿರುವ ಪ್ರಕಾರ ಮೊದ ಮೊದಲು ಚೆನ್ನಾಗಿಯೇ ಇರುತ್ತಿದ್ದ ವಿನಯ್ ಬರಬರುತ್ತಾ ಅನುಮಾನಕ್ಕೆ ಬಿದ್ದಿದ್ದರಂತೆ ಎಂದು ತಾಯಿ ಆರೋಪಿಸಿದ್ದಾರೆ.
ಯಾರ ಜೊತೆ ಮಾತನಾಡಿದರೂ ಭಾರಿ ಸಂಶಯ ಪಡುತ್ತಿದ್ದ ವಿನಯ್ ಕಾಲ್ ಮಾಡಿದಾಗ ಸಂಗೀತಾಳ ಮೊಬೈಲ್ ವೇಟಿಂಗ್ ಬಂದರಂತೂ ಆ ದಿನ ರಂಪಾಟ ಮಾಡ್ತಿದ್ದನಂತೆ.
ಈ ವಿಚಾರವನ್ನು ಸಾಕಷ್ಟು ಬಾರಿ ಸಂಗೀತಾ ತಾಯಿಯ ಬಳಿ ಹೇಳಿಕೊಂಡಿದ್ದರಂತೆ. ಅಷ್ಟೇ ಅಲ್ಲದೆ ಮಕ್ಕಳ ವಿಚಾರವಾಗಿಯೂ ದಂಪತಿ ನಡುವೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ.
ಒಂದೆರಡು ತಿಂಗಳು ನೆಟ್ಟಗಿದ್ದವನು ಪೂರ್ತಿ ಒಂದೂವರೆ ವರ್ಷ ಕಾಟ ಕೊಟ್ಟಿದ್ದಾನೆಂದು ಮಗಳು ತಾಯಿಯ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ನಿನ್ನೆ ಬೆಳಗ್ಗೆ 4-30ಕ್ಕೆ ಕೂಡ ತಾಯಿಗೆ ಕರೆ ಮಾಡಿ ದುಖಃ ತೋಡಿಕೊಂಡಿದ್ದರಂತೆ. ಇಷ್ಟೆಲ್ಲಾ ಸಮಸ್ಯೆ ಇದ್ದಾಗ ಹಿರಿಯರು ಸಂಧಾನ, ಸಮಾಧಾನ ಮಾಡಲು ಮುಂದಾಗಿದ್ದಾರೆ. ಅದಕ್ಕೂ ಬಗ್ಗದೆ ವಿನಯ್ ತನ್ನದೇ ದರ್ಪ ಮೆರೆಯುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಆತ್ಮಹತ್ಯೆಯ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾಗಿದ್ದು ತನಿಖೆ ಮುಂದುವರೆದಿದೆ.
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
More Stories
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ