ಕಳೆದ ಎರಡು ದಿನ ಕೋವಿಡ್ ಸಂಖ್ಯೆ ಕಡಿಮೆ ಆಗಿದೆ. ಶಾಲೆಗಳಲ್ಲಿ ಕೋವಿಡ್ ಬಂದವರು ಕೂಡ ಈಗ ಚೆನ್ನಾಗಿ ಇದ್ದಾರೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೂಡ ಕಡಿಮೆ ಆಗಿಲ್ಲ ಹೀಗಾಗಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಲಾ-ಕಾಲೇಜು ಬಂದ್ ಮಾಡುವುದಿಲ್ಲ ಎಂದು ಶಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಚಿವರು, ರೆಸಿಡೆನ್ಸಿ ಶಾಲೆ ಬಗ್ಗೆ ಹೊಸ SOP ಏನಾದರೂ ಮಾಡ್ತೀರಾ ಅಂತ ಕೇಳಿದ್ದೇವೆ. ರಾಜ್ಯದಲ್ಲಿ ಶಾಲೆ ಬಂದ್ ಮಾಡುವ ಸ್ಥಿತಿ ಇಲ್ಲ. ತಾಂತ್ರಿಕ ಸಲಹಾ ಸಮಿತಿ ರಿಪೋರ್ಟ್ ನೀಡಿದ ಆದಾರ ಮೇಲೆ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಮಾಡಿದ್ದಾರೆ. ಯಾವುದೇ
ಕಾರಣಕ್ಕೂ ಶಾಲೆ ಕ್ಲೋಸ್ ಆಗುವುದಿಲ್ಲ ಎಂದರು
ಹಾಸ್ಟೆಲ್ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಬಾರದು. ಆದಷ್ಟು ದೂರು ದೂರ ಕುಳಿತು ಊಟ ಮಾಡಬೇಕು.
ಮಕ್ಕಳು ಸ್ನಾನ ಮಾಡುವಾಗ ಒಟ್ಟಿಗೆ ಹೋಗಬಾರದು. ಮಲಗುವಾಗಲೂ ಸಾಧ್ಯವಾದಷ್ಟು ದೂರವೇ ಮಲಗಲು ಸೂಚನೆ ನೀಡಿದ್ದೇವೆ.
ಇಲ್ಲಿಯವರೆಗೆ 7 ರೆಸಿಡೆನ್ಸಿ ಶಾಲೆಯಲ್ಲಿ ಮಾತ್ರ ಸೋಂಕು ಪತ್ತೆ ಆಗಿದೆ. ಹಾಸ್ಟೆಲ್ ಸರಿಯಾಗಿ SOP ಪಾಲನೆ ಆಗ್ತಿದ್ಯಾ ಅಂತ ಬಿಇಓ ಮತ್ತು ಟಿಹೆಚ್ಓ ಸಮಿತಿ ನೇತೃತ್ವದಲ್ಲಿ ಮಾಡುವುದಾಗಿ ಹೇಳಿದರು
ರಾಜ್ಯದಲ್ಲಿ ಇಲ್ಲಿಯವರೆಗೂ172 ಶಿಕ್ಷಕ ಹಾಗೂ ಮಕ್ಕಳಿಗೆ ಕೊರೊನಾ ಬಂದಿತ್ತು. ಅದರಲ್ಲಿ 100 ಮಂದಿ ಚೇತರಿಸಿಕೊಂಡಿದ್ದಾರೆ. ಶಾಲೆಗಳಲ್ಲಿ ಎಲ್ಲಾ ಕಡೆಯೂ ಮಕ್ಕಳ ಹಾಜರಾತಿ ಕೂಡ ಚೆನ್ನಾಗಿದೆ. ಹಳೆಯ SOP ಏನಿದೆ ಅದೇ ಕಂಟಿನ್ಯೂ ಆಗಿದೆ. ರೆಸಿಡೆನ್ಸಿ ಶಾಲೆ ಹಾಗೂ ಹಾಸ್ಟೆಲ್ ನಲ್ಲಿ ವಿಶೇಷ ಗಮನ ಹರಿಸಲಾಗುತ್ತದೆ.
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ