February 27, 2026

Newsnap Kannada

The World at your finger tips!

11 deaths

ಸೇನಾ ಹೆಲಿಕ್ಯಾಪ್ಟರ್ ಪತನ‌: ಸಾವಿನ‌ಸಂಖ್ಯೆ 13 ಕ್ಕೇ ಏರಿಕೆ : ಬದುಕಿ ಉಳಿದ ಒಬ್ಬರಿಗೆ ಚಿಕಿತ್ಸೆ

Spread the love

ತಮಿಳುನಾಡಿನ ಊಟಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾದ , ಘಟನೆಯಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಬದುಕುಳಿದ ಒಬ್ಬರಿಗೆ ತೀವ್ರ ಸುಟ್ಟ ಗಾಯಗಳಿಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತದೆ. 14 ಮಂದಿ ಪ್ರಯಾಣಿಸುತ್ತಿದ್ದ 13 ಮಂದಿ ದುರಂತ ಸಾವು ಕಂಡಿದ್ದಾರೆ.

ಜನರಲ್ ಬಿಪಿನ್ ರಾವತ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಮೃತ ದೇಹಗಳನ್ನ ಗುರುತಿಸಲು ಸಾಧ್ಯವಾಗದ ಕಾರಣ, ಡಿಎನ್‌ಎ ಮೊರೆ ಹೋಗಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಸೇನಾ ಹೆಲಿಕಾಪ್ಟರ್ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ ಸೇನಾ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಸೇನಾ ಕಾಲೇಜಿನಲ್ಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತಿದ್ದರು.

ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡುತ್ತಿದ್ದವರು ಯಾರು ?

ಸಿಡಿಎಸ್ ಜನರಲ್ ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ ಎಸ್ ನಾಯಕ, ಲೆಫ್ಟಿನೆಂಟ್ ಹರ್ಜಿಂದರ್ ಸಿಂಗ್, ಎನ್ ಕೆ ಗುರ್ ಸೇವಕ್ ಸಿಂಗ್, ಎನ್ ಕೆ ಜಿತೇಂದ್ರ ಸಿಂಗ್, ಎಲ್/ಎನ್ ಕೆ ವಿವೇಕ್ ಕುಮಾರ್, ಎಲ್/ಎನ್ ಕೆ ಬಿ ಸಾಯಿ ತೇಜ, ಎಚ್ ಎವಿ ಸಾತ್ಪಾಲ್ ಸೇರಿದಂತೆ 14 ಮಂದಿಯನ್ನು ಹೊತ್ತೊಯ್ಯುತ್ತಿತ್ತು.

error: Content is protected !!