ಈ ಬಾರಿಯ ಶಿರಾದ ಉಪ ಚುಣಾವಣೆಯ ಕದನದಲ್ಲಿ ಬಿಗ್ ಬಾಸ್‌ನ ರನ್ನರ್ ಅಪ್ ಎಸ್.ಜೆ. ದಿವಾಕರ್ ಸ್ಪರ್ಧಿಸಲಿದ್ದಾರೆ.
ಉಪ ಚುಣಾವಣೆಯ ಕದನ ರಾಜ್ಯದಲ್ಲಿ ಭಾರೀ ಕುತೂಹಲವನ್ನೆಬ್ಬಿಸಿದೆ. ಈಗ ಬಿಗ್ ಬಾಸ್‌ನ ರನ್ನರ್ ಅಪ್ ಕೂಡ ಚುಣಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಜನರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಈ ಕುರಿತು ಮಾತನಾಡಿದ ದಿವಾಕರ್ ಅವರು ‘ನನ್ನ ಊರು ಟಿ. ನರಸೀಪುರ, ಶಿರಾದೊಡನೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಅನೇಕ ಬಾರಿ ಸೇಲ್ಸ್‌ಮೆನ್ ಕೆಲಸವನ್ನೂ ನಾನು ಮಾಡಿದ್ದೇನೆ. ಅಲ್ಲಿನ ಜನರ ಪರಿಚಯವೂ ನನಗೆ ಸಾಕಷ್ಟಿದೆ. ಹಾಗಾಗಿ ಚುಣಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡೆ. ಈಗ ಕೆಲವೊಂದು ಪಕ್ಷಗಳ ಜೊತೆ ಟಿಕೆಟ್‌ಗಾಗಿ ಮಾತುಕತೆ ನಡೆಸುತ್ತಿದ್ದೇನೆ. ಅವರೇನಾದರೂ ಟಿಕೆಟ್ ನೀಡದಿದ್ದರೆ, ನಾನೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ. ನಾನು ಸಾಮಾನ್ಯನಾಗಿಯೇ ಬಿಗ್ ಬಾಸ್ ಪ್ರವೇಶಿಸಿದವನು. ಚುಣಾವಣೆಯಲ್ಲಿಯೂ ಸಾಮಾನ್ಯ ಅಭ್ಯರ್ಥಿಯಾಗೇ ಸ್ಪರ್ಧಿಸುತ್ತೇನೆ. ಜನರು ನನ್ನ ಗೆಲ್ಲಿಸುವ ವಿಶ್ವಾಸ ನನಗಿದೆ’ ಎಂದು ಹೇಳಿದರು.
ನವೆಂಬರ್ 3 ರಂದು ಶಿರಾದ ಉಪಚುಣಾವಣೆ ನಡೆಯಲಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು