November 16, 2024

Newsnap Kannada

The World at your finger tips!

omicron

ಫೆಬ್ರವರಿ 3ನೇ ವಾರದಲ್ಲಿ ಕೋವಿಡ್‌ 3ನೇ ಅಲೆ ಸಾಧ್ಯತೆ: ಪ್ರೊ. ಮಣೀಂದ್ರ ಅಗರವಾಲ್‌

Spread the love

ಕೊರೊನಾ ವೈರಸ್‌ ಹೊಸ ರೂಪಾಂತರಿ ಓಮಿಕ್ರಾನ್‌ ಸೋಂಕು ಈಗಾಗಲೇ ಭಾರತದ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ ಫೆಬ್ರವರಿ ತಿಂಗಳಿಂದ ಮೂರನೇ ಅಲೆ ಭಾರತದಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿ ಪ್ರೊ. ಮಣೀಂದ್ರ ಅಗರವಾಲ್‌ ತಿಳಿಸಿದ್ದಾರೆ.

ಗಣಿತಶಾಸ್ತ್ರೀಯ ಆಧಾರದ ಮೇಲೆ ಈ ಅಂದಾಜು ಮಾಡಿದ್ದಾರೆ. ಹೊಸ ರೂಪಾಂತರಿ ಓಮಿಕ್ರಾನ್‌ ಫೆಬ್ರವರಿ ತಿಂಗಳ ವೇಳೆಗೆ ದೇಶದಲ್ಲಿ ಮೂರನೇ ಅಲೆ ಪರಿಣಾಮವನ್ನು ನೋಡಬಹುದಾಗಿದೆ.

ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ. ಓಮಿಕ್ರಾನ್‌ ತೀವ್ರತೆಯು ಡೆಲ್ಟಾ ರೂಪಾಂತರದಂತೆ ಕಂಡುಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಓಮಿಕ್ರಾನ್‌ನ ಹೆಚ್ಚು ಪ್ರಕರಣಗಳು ವರದಿಯಾಗಿರುವ ದಕ್ಷಿಣ ಆಫ್ರಿಕಾದ ಬೆಳವಣಿಗೆಯನ್ನು ನಾವು ಗಮನಿಸಬಹುದು. ಅಲ್ಲಿ ಈವರೆಗೆ ಯಾರೂ ಆಸ್ಪತ್ರೆಗೆ ಸೇರುವಷ್ಟು ಸಮಸ್ಯೆ ಕಂಡುಬಂದಿಲ್ಲ ಎಂದು ಅಗರವಲ್‌ ವಿವರಿಸಿದ್ದಾರೆ.

ಓಮಿಕ್ರಾನ್‌ ಕುರಿತ ಅಂಕಿ-ಅಂಶ ಹಾಗೂ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯು ವೈರಸ್‌ ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ಓಮಿಕ್ರಾನ್‌ ಅತಿ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದ್ದರೂ, ಅದರ ಪರಿಣಾಮ ಅಷ್ಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!