ನನಗೆ ಒಂದು ಕಡೆ ಜೆಡಿಎಸ್ ಹೊಡೆತ ಇನ್ನೊಂದೆಡೆ ಬಿಜೆಪಿ ಮತ್ತು ಆರ್ಎಸ್ಎಸ್ ಹೊಡೆತ ನೀಡಿದೆ. ಈಗ ನನ್ನ ರಕ್ಷಣೆಗೆ ಮತದಾರರೇ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮನವಿ ಮಾಡಿದರು
ಬದಾಮಿಯಲ್ಲಿ ಕೈ ಆಭ್ಯರ್ಥಿ ಸುನೀಲಗೌಡ ಪಾಟೀಲ ಪರ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ
ಭಾಷಣ ಮಾಡಿ, ನಾನು 12 ವರ್ಷ ಹಣಕಾಸು ಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ . ಯಾವನಾದ್ರೂ ಒಬ್ಬ ಕಂಟ್ರಾಕ್ಟರ್ ಎಲ್ ಓಸಿ ತೆಗೆದುಕೊಳ್ಳಲು ಸಿದ್ದರಾಮಯ್ಯ ಐದು ಪೈಸೆ ತೆಗೆದುಕೊಂಡಿದ್ದಾನೆ ಅಂದ್ರೆ ಆವತ್ತೆ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಸವಾಲು ಹಾಕಿದರು
ಒಂದು ಕಡೆ ಜೆಡಿಎಸ್, ಬಿಜೆಪಿ, ಇನ್ನೊಂದಡೆ ಆರ್ಎಸ್ಎಸ್ ಹೊಡೆತ ನೋಡಿ, ಸದ್ಯ ನೀವೆ ನನ್ನ ರಕ್ಷಣೆಗೆ ಬರಬೇಕು. ಬರ್ತಿರಿ ಅಲ್ವಾ ಬಿಜೆಪಿಯವರು ನಾಚಿಗೆ ಇಲ್ಲದವರು ಅವರಿಗೆ ಅಪ್ಪಿ ತಪ್ಪಿಯೂ ಓಟು ಹಾಕಬಾರದು. ಈ ಜಿಗಜಿಣಗಿ, ಕಾರಜೋಳ, ನಾರಾಯಣಸ್ವಾಮಿ ಇವರೆಲ್ಲ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದರು
ಅವರು ಸಂವಿಧಾನ ಬದಲಾಯಿಸುತ್ತೇವೆ ಅನ್ನುವ ಪಕ್ಷಕ್ಕೆ ಹೋಗಿದ್ದಾರೆ. ನಾನು ದಲಿತರನ್ನು ದಾರಿ ತಪ್ಪಿಸ್ತಿದ್ದಾರೆ ಅಂತ ಭಾಷಣ ಮಾಡಿದ್ದೆ. ಆದರೆ, ಸಿದ್ದರಾಮಯ್ಯ ದಲಿತರು ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದಿದ್ದಾರೆ ಎಂದು ಹುಟ್ಟು ಹಾಕಿಬಿಟ್ಟರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )