ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದಲೇ ನಾಳೆಯಿಂದ ಬೆಂಗಳೂರಿನಲ್ಲಿ ಆಟೋಗಳ ದರ ಏರಿಕೆ ಆಗಲಿದೆ
ಈ ಮೊದಲು ಕನಿಷ್ಠ ದರ 25 ರು ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರು ಸೇರಿಸಿದ್ದರಿಂದ ನಾಳೆಯಿಂದಲೇ ಮಿನಿಮಮ್ ದರ 30 ರು ಗೆ ಏರಿಕೆಯಾಗಲಿದೆ.
ಜೊತೆಗೆ ಹಿಂದೆ ಒಂದು ಕಿ.ಮೀಗೆ 13 ರೂ. ಮೀಟರ್ ಮುಖಾಂತರ ಪಡೆದುಕೊಳ್ಳಲಾಗುತ್ತಿದೆ. ಸದ್ಯ ಮೀಟರ್ ದರವನ್ನು ಏರಿಕೆ ಮಾಡಲಾಗಿದೆ. ಒಂದು ಕಿಮೀಗೆ ಇನ್ಮುಂದೆ 15 ರು ಆಗಲಿದೆ.
ಕಳೆದ ಕೆಲ ದಿನಗಳಿಂದಲೂ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಲೆ ಇದೆ. ಇಂಧನ, ಆಟೋ ಗ್ಯಾಸ್, ಆಟೋ ಬಿಡಿ ಭಾಗಗಳು, ಇನ್ಸೂರೆನ್ಸ್ ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರಿದೆ.
ಇದರಿಂದಾಗಿ ಆಟೋ ಚಾಲಕರು ಜೀವನ ನಡೆಸಬೇಕಾದರೆ ಬಹಳ ಕಷ್ಟವಾಗಿತ್ತು. ಇದರಿಂದ ಕಂಗೆಟ್ಟು ಕುಳಿತಿದ್ದ ಆಟೋ ಚಾಲಕರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು