ಡಿಸೆಂಬರ್ 1 ರಿಂದ JIO ದರ ಶೇ 20 ರಷ್ಟು ದುಬಾರಿ – ಈಗ ಎಷ್ಟು ಏರಿಕೆಯಾಗಿದೆ?

Team Newsnap
2 Min Read

JIO ಅನ್‍ಲಿಮಿಟೆಡ್ ಪ್ರೀಪೇಯ್ಡ್ ಯೋಜನೆಗಳು ಡಿಸೆಂಬರ್ 1 ರಿಂದ ಹೊಸ ದರಗಳು ಜಾರಿಗೆ ಬರಲಿದೆ. ಶೇ 20ರಷ್ಟು ಹೆಚ್ಚಳ ಮಾಡಲಾಗಿದೆ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ(ವಿಐ) ಕೂಡಾ ಪ್ರಿಪೇಯ್ಡ್ ಯೋಜನೆಯಲ್ಲಿ 25%ದಷ್ಟು ಹೆಚ್ಚಳವನ್ನು ಘೋಷಿಸಿದೆ ಈಗಾಗಲೇ ಅದು ಜಾರಿಗೆ ಬಂದಿದೆ.

ಈಗ ಜಿಯೋ ಪ್ರಿಪೇಯ್ಡ್ ಪ್ಯಾಕ್‍ಗಳ ಬೆಲೆಯನ್ನು 20% ಏರಿಕೆ ಮಾಡುವುದಾಗಿ ತಿಳಿಸಿದೆ.

75 ರು ಇದ್ದ ಪ್ಯಾಕ್ ಬೆಲೆ 91 ರೂ.ಗೆ ಏರಿಕೆಯಾಗಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನ್‍ಲಿಮಿಟೆಡ್ ಕರೆ ಹಾಗೂ 50 ಎಸ್‍ಎಂಎಸ್ ನೊಂದಿಗೆ ತಿಂಗಳಿಗೆ 3ಜಿಬಿ ಡೇಟಾವನ್ನು ನೀಡುತ್ತದೆ. 24 ದಿನಗಳ ವ್ಯಾಲಿಡಿಟಿಯ ಯೋಜನೆ ಈ ಹಿಂದೆ 149 ರೂ. ಇದ್ದು, 179 ರೂ.ಗೆ ಏರಿಕೆಯಾಗಿದೆ. ಇದರಲ್ಲಿ 1ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ.

28 ದಿನಗಳ ಪ್ಯಾಕ್:

129 ರೂ.ಯ ಪ್ಯಾಕ್ ಅನ್ನು 155 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 300 ಎಸ್‍ಎಂಎಸ್ ಉಚಿತವಾಗಿ ಇದೆ.

199 ರೂ.ಯ ಯೋಜನೆ 239 ರೂ.ಯಾಗಿದೆ. ಇದರಲ್ಲಿ 1.5ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ಇದೆ.

249 ರುಯೋಜನೆ 299 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ಸಿಗುತ್ತದೆ.

56 ದಿನಗಳ ಪ್ಯಾಕ್:

56 ದಿನಗಳ ವ್ಯಾಲಿಡಿಟಿ ಹೊಂದಿರುವ ಎರಡು ಯೋಜನೆಗಳು 1.5ಜಿಬಿ ಹಾಗೂ 2ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆಗಳು ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ. ಇವುಗಳು ಈ ಹಿಂದೆ 399 ರು ಹಾಗೂ 444 ರು ಇದ್ದು, ಕ್ರಮವಾಗಿ 479 ರು ಹಾಗೂ 533 ರು ಗೆ ಏರಿಕೆಯಾಗಿದೆ.

84 ದಿನಗಳ ಪ್ಯಾಕ್:  

329 ರೂ., 555 ರೂ. ಹಾಗೂ 599 ರೂ. ಇದ್ದ ಪ್ಯಾಕ್‌ಗಳು ಕ್ರಮವಾಗಿ 395 ರೂ., 666 ರೂ. ಹಾಗೂ 719 ರೂ.ಗಳಿಗೆ ಏರಿಕೆಯಾಗಿದೆ. ಈ ಮೂರೂ ಯೋಜನೆಗಳು ಅನ್‍ಲಿಮಿಟೆಡ್ ಕರೆ, 100 ಎಸ್‍ಎಮ್‍ಎಸ್‍ಗಳನ್ನು ಉಚಿತವಾಗಿ ನೀಡುವುದರೊಂದಿಗೆ ಕ್ರಮವಾಗಿ 6ಜಿಬಿ ಡೇಟಾ, 1.5ಜಿಬಿ ದೈನಂದಿನ ಡೇಟಾ ಹಾಗೂ 2ಜಿಬಿ ದೈನಂದಿನ ಡೇಟಾವನ್ನು ನೀಡುತ್ತದೆ.

Share This Article
Leave a comment