ಕರ್ನಾಟಕದ 10 ಊರುಗಳಲ್ಲಿ ವಿಷಯುಕ್ತ ಕುಡಿಯುವ ನೀರು

Team Newsnap
2 Min Read

ಕರ್ನಾಟಕದ 14 ಊರುಗಳಲ್ಲಿ‌ ಕುಡಿಯುವ ನೀರಿಗೆ ಜಲಗಂಡಾಂತರ ತಲೆದೋರಿದೆ. ಈ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ಯುರೇನಿಯಮ್ ವಿಷದ ಅಂಶ ಸೇರಿದೆ. ಇದು ಮನುಷ್ಯನ ದೇಹಕ್ಕೆ ಬಹು ಮಾರಕ.

ಕೇಂದ್ರ ಸರ್ಕಾರದ ಜಲಸಂಪನ್ಮೂಲ ಹಾಗೂ ನದಿಗಳ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು 2019-20 ರಲ್ಲಿ ದೇಶದ ಆಯ್ದ 18 ರಾಜ್ಯಗಳ 151 ಜಿಲ್ಲೆಗಳಿಂದ 1500 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿದ ಇಲಾಖೆಯು ಪರೀಕ್ಷೆಗೊಳಪಡಿಸಿತ್ತು. ಈಗ ಅದರ ವರದಿ ಬಂದಿದೆ. ನಿಗದಿತ ಮಿತಿಗಿಂತಲೂ ಹೆಚ್ಚಿನ ಪ್ರಮಾಣದ ಯುರೇನಿಯಮ್ ಅಂಶ ಈ ನೀರಿನ ಮಾದರಿಗಳಲ್ಲಿದೆ ಎಂದು ತಿಳಿದು ಬಂದಿದೆ.

ಜಲಸಂಪನ್ಮೂಲ ಹಾಗೂ ನದಿಗಳ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ನಮೂದಾಗಿದ್ದು, ಕೃಷಿಯಲ್ಲಿ‌ ಬಳಸುವ ಅತಿಯಾದ ನೀರು ಹಾಗೂ ರಾಸಾಯನಿಕಗಳ ಬಳಕೆಯ ಕಾರಣದಿಂದ ಅಂತರ್ಜಲದಲ್ಲಿ‌ ಯುರೇನಿಯಮ್ ವಿಷದ ಅಂಶ ಅಧಿಕವಾಗಿದೆ‌. ‘ನೀರಿನಲ್ಲಿ 30 ಮೈಕ್ರೋ ಗ್ರಾಂ‌ ಗಿಂತಲೂ ಹೆಚ್ಚಿನ ಯುರೇನಿಯಮ್ ಅಂಶವಿದ್ದರೆ ಮನುಷ್ಯನ‌ ಕಿಡ್ನಿ ಪೂರ್ತಾ ಹಾಳಾಗುವದಲ್ಲದೇ ಕ್ಯಾನ್ಸರ್‌ನಂತಹ‌ ಮಾರಕ‌ ಖಾಯಿಲೆಗಳು ಬರಬಹುದು. ಅಲ್ಲದೇ ಥೈರಾಯ್ಡ್ ಕ್ಯಾನ್ಸರ್, ಮೂಳೆ ತೊಂದರೆ, ಕರುಳಿನ‌ ತೊಂದರೆ, ಟ್ಯೂಮರ್‌ಗಳು ಕಾಣಿಸಿಕೊಳ್ಳಬಹುದು’ ಎಂದು ವಿಶ್ವಸಂಸ್ಥೆ ಹೇಳುತ್ತದೆ‌.

ಕುಡಿಯುವ ನೀರಿನಲ್ಲಿ ಯುರೇನಿಯಮ್ ಅಂಶ ಅಧಿಕವಾಗಿರುವ ಊರುಗಳೆಂದರೆ;

  1. ಬಳ್ಳಾರಿ ಜಿಲ್ಲೆ ಕೂಡ್ಲಿಗಿ‌ ತಾಲೂಕಿನ‌ ಯೋಗಿಕಲ್ಲು ಗ್ರಾಮ – 150.64 ಮೈಕ್ರೋ ಗ್ರಾಂ
  2. ದೇವನಹಳ್ಳಿ ಆವಟಿ ಗ್ರಾಮ – 111.84 ಮೈಕ್ರೋ ಗ್ರಾಂ
  3. ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಬಡವನಹಳ್ಳಿ – 145.77 ಮೈಕ್ರೋ ಗ್ರಾಂ
  4. ಬೆಂಗಳೂರಿನ‌ ಗೊಲ್ಲಹಳ್ಳಿ – 104.02 ಮೈಕ್ರೋ ಗ್ರಾಂ
  5. ಕೋಲಾರದ ಆನೆಗೊಂಡನಹಳ್ಳಿ – 73.57 ಮೈಕ್ರೋ ಗ್ರಾಂ
  6. ಮೈಸೂರು ಗ್ರಾಮಾಂತರ ಜಿಲ್ಲೆಯ ಲಿಂಗಸೂರಿನ‌ ಬೊಮ್ಮನಹಾಳ – 54.63 ಮೈಕ್ರೋ ಗ್ರಾಂ
  7. ಹೊಸಪೇಟೆಯ ವೆಂಕಟಾಪುರ – 54.73 ಮೈಕ್ರೋ ಗ್ರಾಂ
  8. ಕಲಬುರಗಿಯ ಚಿತ್ತಾಪುರ – 34.21 ಮೈಕ್ರೋ ಗ್ರಾಂ
  9. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ತಿರುಮಲನಗರ ಛತ್ರ – 40.38 ಮೈಕ್ರೋ‌ ಗ್ರಾಂ
  10. ರಾಯಚೂರು ಜಿಲ್ಲೆಯ ಸಿಂಧನೂರು‌ ತಾಲೂಕಿನ ಹಂಚಿನಾಳ ಗ್ರಾಮ – 35.66 ಮೈಕ್ರೋ ಗ್ರಾಂ
Share This Article
Leave a comment