ಐಪಿಎಲ್ 20-20ಯ 16 ನೇ ದಿನದ ಮ್ಯಾಚ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ, ಡೆಲ್ಲಿ ಕ್ಯಾಪಿಟಲ್ಸ್ ತಂಡ 18 ರನ್‌ಗಳ ಭರ್ಜರಿ ವಿಜಯ ಸಾಧಿಸಿತು.
ದುಬೈನ ಶಾರ್ಜಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ಪಿ. ಶಾ ಮತ್ತು ಶಿಖರ್ ಧವನ್ ಉತ್ತಮ ಆರಂಭವನ್ನೇ ಮಾಡಿದರು. ಆದರೆ 26 (16) ರನ್‌ಗಳಲ್ಲೇ ಶಿಖರ್ ಅವರು ವರುಣ್ ಚಕ್ರವರ್ತಿ ಅವರ ಬೌಲಿಂಗ್‌ನಲ್ಲಿ ಔಟಾದರು. ಶಿಖರ್ ತರುವಾಯ ಮೈದಾನಕ್ಕೆ ಕಾಲಿಟ್ಟ ಡೆಲ್ಲಿ ತಂಡದ ನಾಯಕ ಎಸ್. ಐಯ್ಯರ್ ಎದುರಾಳಿ ಬೌಲರ್‌ಗಳ ಬೆವರಿಸಳಿಸಿದರು. ಶಾ ಮತ್ತು ಐಯ್ಯರ್ ಅವರ ಉತ್ತಮ ಜೋಡಿಯಾಟದಿಂದ ತಂಡದ ಮೊತ್ತ ಪೇರತೊಡಗಿತು. ಶಾ 66 (41) ಮತ್ತು ಐಯ್ಯರ್ 88 (38) ರನ್ ಗಳಿಕೆ ಮಾಡಿ ತಂಡದ ಮೊತ್ತ 200 ಗಡಿ ದಾಟಿ ಎದುರಾಳಿ ತಂಡಕ್ಕೆ ಉತ್ತಮ ಸವಾಲನ್ನು ನೀಡುವಲ್ಲಿ ಯಶಸ್ವಿಯಾದರು. ತಂಡವು ಒಟ್ಟು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು.
ಇತ್ತ ಕೋಲ್ಕತ ತಂಡವು ಬೃಹತ್ ಮೊತ್ತದ ಸವಾಲನ್ನು ಎದುರಿಸಬೇಕಾಯಿತಾದರೂ ತಂಡದ ಬಳಿ ಸಮರ್ಥ ಆಟಗಾರರಿದ್ದರು. ಪ್ರಾರಂಭದಲ್ಲಿ ಮೈದಾನಕ್ಕಿಳಿದ ಎಸ್. ಗಿಲ್ ಹಾಗೂ ನರೈನ್ ಅವರ ಆಟವೇ ಎಲ್ಲರಿಗೂ ನಿರಾಸೆ ಮೂಡಿಸಿತು. ನರೈನ್ ಕೇವಲ 3 ರನ್‌ಗಳಿಗೆ ಪೆವಿಲಿಯನ್ ಸೇರಿದರೆ, ಗಿಲ್ ಕೇವಲ 28 ರನ್‌ಗಳಿಗೆ ಅಮಿತ್ ಮಿಶ್ರಾ ಬೌಲಿಂಗ್‌ಗೆ ಔಟಾದರು. ತಂಡವನ್ನು ಸಬಲಗೊಳಿಸಲು ಪ್ರಯತ್ನಪಟ್ಟ ಎಸ್. ರಾಣಾ 58 (35) ಹಾಗೂ ಇ. ಮಾರ್ಗನ್ 44 (18) ರನ್ ಗಳಿಸಿದರೂ ತಂಡ ಸೋಲಿನ ಹಾದಿ ಹಿಡಿಯಲೇ ಬೇಕಾಯಿತು. ಎದಿರಾಳಿ ತಂಡದ ಹರ್ಷಲ್ ಪಟೇಲ್ ಹಾಗೂ ಆನ್ರಿಕ್ ನಾರ್ಟ್ಜೆ ಅವರ ಬೌಲಿಂಗ್ ಸಹ ಕೆಕೆಆರ್ ತಂಡಕ್ಕೆ ದಿಗ್ಬಂಧನ ಹಾಕಿತ್ತು. 20 ಓವರ್‌ಗಳಲ್ಲಿ ಕೆಕೆಆರ್ ತಂಡ 8 ವಿಕೆಟ್ ನಷ್ಟಕ್ಕೆ 210 ರನ್‌ಗಳನ್ನು ಗಳಿಸಿತು. ಒಟ್ಟು 18 ರನ್‌ಗಳಿಂದ ಡಿಸಿ ಗೆಲುವಿನ ಮತ್ತೊಂದು ಮೆಟ್ಟಿಲೇರಿತು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ