ಐಪಿಲ್ 13ನೇ ಸರಣಿಯ 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭೂತಪೂರ್ವ ಜಯ ಸಾಧಿಸಿತು.
ದುಬೈನ ಅಬು ದಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಯಲ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟ ನಾಯಕ ಎಸ್. ಸ್ಮಿತ್ ಹಾಗೂ ಜೆ. ಬಟ್ಲರ್ ಆಟ ಗಮನಾರ್ಹವಾಗಿರಲಿಲ್ಲ. ನಾಯಕ ಸ್ಮಿತ್ ಕೇವಲ 5 ರನ್‌ಗಳಿಗೆ ಪೆವಿಲಿಯನ್ ಸೇರಿದರೆ 22 ರನ್‌ಗಳಿಗೆ ಬಟ್ಲರ್ ಮೈದಾನದಿಂದ ಹೊರನಡೆದರು. ಎಂ. ಲೊಮ್ರೋರ್ ಅವರು 47 (39) ರನ್‌ಗಳಿಸಿದರಾದರೂ ತಂಡಕ್ಕೆ ಅದು ಯಾವ ರೀತಿಯಲ್ಲೂ ಸಹಾಯಕವಾಗಲಿಲ್ಲ. ಅಲ್ಲದೇ ಬೆಂಗಳೂರು ತಂಡದ ಯುಜೇಂದ್ರ ಚೌಹಾಲ್ ಹಾಗೂ ಇಸುರು ಉದಾನ ಅವರ ಬೌಲಿಂಗ್ ಎಲ್ಲ ಬ್ಯಾಟ್ಸ್‌ಮನ್‌ಗಳನ್ನೂ ಕಟ್ಟಿಹಾಕಿತು. ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.
ರಾಯಲ್ ಚಾಲೆಂಜರ್ಸ್ ತಂಡದ ಪರ ಬ್ಯಾಟಿಂಗ್ ಪ್ರಾರಂಭ ಮಾಡಿದ ದೇವದತ್ ಪಡಿಕಲ್ ಅವರ ಆಟ ಆಕರ್ಷಕವಾಗಿತ್ತು. 45 ಎಸೆತಗಳಲ್ಲಿ 63 ರನ್ ಗಳಿಸಿ ಪ್ರತಿ ಬಾರಿಯಂತೆ ಈ ಬಾರಿಯೂ ತಂಡವನ್ನು ಉತ್ಸಾಹಯುತಗೊಳಿಸಿದರು. ಆದರೆ ಪಡಿಕ್ಕಲ್ ಅವರ ಜೊತೆಯಾಟಗಾರ ಎಂ. ಫಿಂಚ್ ಕೇವಲ 8 ರನ್‌ಗಳಿಗೆ ಔಟಾದರು. ನಂತರ ಮೈದಾನಕ್ಕಿಳಿದ ತಂಡದ ನಾಯಕ ರಾಯಲ್ಸ್‌ಗಳ ಬೆವರಿಳಿಸಿದರು. 53 ಎಸೆತಗಳಲ್ಲಿ 72 ರನ್‌ಗಳ ದೊಡ್ಡ ಮೊತ್ತವನ್ನೇ ತಂಡಕ್ಕೆ ನೀಡಿದರು. ನಿಗದಿತ ಓವರ್‌ಗಳಿಗಿಂತಲೂ ಮೊದಲೇ ಆಟವನ್ನು ಮುಗಿಸಿದ ಚಾಲೆಂಜರ್ಸ್ 19.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ಗಳಿಸಿ ವಿಜಯಮಾಲೆಯನ್ನು ತಮ್ಮದಾಗಿಸಿಕೊಂಡರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ